ಕ್ಷೀಣಿಸುವ ಭೀತಿ ಎದುರಿಸುತ್ತಿರುವ ಕನ್ನಡ ಭಾಷೆಗೆ ಸ್ವರ ಪರಿಣಾಮಕಾರಿ

ಫಾ ವಿಕ್ಟರ್ ಡಿಸೋಜಾ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಸಂಗೀತಕ್ಕೆ ಮನಸ್ಸನ್ನು ಪ್ರಪುಲ್ಲಗೊಳಿಸಿ ಧನಾತ್ಮಕ ಶಕ್ತಿಯನ್ನು ಉದ್ದೀಪಿಸುವ ಸಾಮಥ್ರ್ಯ ಹೊಂದಿದೆ. ಆಧುನಿಕ ಗೊಂದಲಮಯ ಸಾಮಾಜಿಕ ಅಸ್ಥಿರತೆಯಿಂದ ಪಾರಾಗುವಲ್ಲಿ, ಸಾಮಾಜಿಕ ಶಾಂತತೆ ನಿರ್ಮಾಣಕ್ಕೆ ಕಲೆ, ಸಾಂಸ್ಕೃತಿಕ ಚಟುವಟುಕೆಗಳನ್ನು ವಿಪುಲವಾಗಿ ಹಮ್ಮಿಕೊಳ್ಳುವ ಮೂಲಕ ಸುಸ್ಥಿರ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸುತ್ತಿರುವ ರಂಗಚಿನ್ನಾರಿ ಜಿಲ್ಲೆಯ ಹೆಮ್ಮೆಯ ಸಂಘಟನೆ ಎಂದು ಕಯ್ಯಾರು ಕ್ರಿಸ್ತರಾಜ ಚರ್ಚ್ ಫಾ ವಿಕ್ಟರ್ ಡಿಸೋಜಾ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಸರಗೋಡಿನ ಸಾಂಸ್ಕೃತಿಕ, ಸಾಹಿತ್ತಿಕ ಸಂಘಟನೆಯಾದ ರಂಗಚಿನ್ನಾರಿಯು ಕರ್ನಾಟಕದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಕಾರದೊಂದಿಗೆ ಕಾಸರ ಗೋಡಿನ ಇಪ್ಪತ್ತು ಕನ್ನಡ ಶಾಲೆಗಳ ಎರಡು ಸಾವಿರ ವಿದ್ಯಾರ್ಥಿಗಳ ಕನ್ನಡ ಸ್ವರ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗಡಿನಾಡು ಕಾಸರಗೋಡಿನಲ್ಲಿ ಕ್ಷೀಣಿಸುವ ಭೀತಿ ಎದುರಿಸುತ್ತಿರುವ ಕನ್ನಡ ಭಾಷೆ, ಸಂಸ್ಕೃತಿಯ ಬೆಳವಣಿಗೆಗೆ ರಂಗಚಿನ್ನಾರಿಯು ಹಮ್ಮಿಕೊಂಡಿರುವ ವಿನೂತನ ಪ್ರಯತ್ನ ಸ್ತುತ್ಯರ್ಹವಾಗಿದ್ದು, ಕನ್ನಡ ನಾಡು ನುಡಿಯ ಅರಿವು ಮೂಡಿಸುವಲ್ಲಿ ಕನ್ನಡ ಸ್ವರ ಪರಿಣಾಮಕಾರಿ ಎಂದು ಅವರು ತಿಳಿಸಿದರು. ಸಾಹಿತ್ಯ, ಗೀತಗಾಯನಗಳು ಭಾಷೆಯ ಮೇಲಿನ ಪ್ರಬುದ್ದತೆ, ಭಾಷಾ ಪ್ರೇಮಕ್ಕೆ ಪ್ರೇರಣೆಯೊದಗಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಫೆಬ್ರವರಿ ತಿಂಗಳಲ್ಲಿ ಕನ್ನಡ ಸ್ವರ ಕಾರ್ಯಕ್ರಮದ ಸಮಾರೋಪ ಸಮಾರಂಭ ಮಂಜೇಶ್ವರದಲ್ಲಿ ಮಟ್ಟದಲ್ಲಿ ನಡೆಯಲಿದ್ದು, ಅಂದು 2 ಸಾವಿರ ವಿದ್ಯಾರ್ಥಿಗಳ ನಾಡಗೀತೆ ಕಾರ್ಯಕ್ರಮ ಏರ್ಪಡಿಸಲಾಗುವುದೆಂದು ರಂಗ ಚಿನ್ನಾರಿಯ ನಿರ್ದೇಶಕ, ರಂಗನಟ ಕಾಸರಗೋಡು ಚಿನ್ನಾ ತಿಳಿಸಿದ್ದಾರೆ.

 

LEAVE A REPLY