ಕನ್ನಡ ನಟಿ ಪಾರೂಲ್ ಮೇಲೆ ನಾಯಿಗಳ ದಾಳಿ

ಮುಂಬೈ  : ನಿನ್ನೆ ಸಂಜೆ ಅಪಾರ್ಟಮೆಂಟ್ ಬಳಿಯೇ ಬೀದಿನಾಯಿಗಳು ದಾಳಿ ನಡೆಸಿವೆ. ನಿನ್ನೆ ಸಂಜೆ ವಾಕ್ ಮಾಡುತ್ತಿದ್ದಾಗ 6 ಬೀದಿ ನಾಯಿಗಳು ದಿಢೀರ್ ದಾಳಿ ಮಾಡಿವೆ. ಮುಂಬೈನ ಕೋಕಿಲ ಬೆನ್ ಆಸ್ಪತ್ರೆಯಲ್ಲಿ ಪಾರೂಲ್ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಾರೂಲ್  ಮುಖ, ಕೈಕಾಲುಗಳಿಗೆ ನಾಯಿಗಳು ಕಚ್ಚಿವೆ. ತಲೆಯಲ್ಲಿ ಸುಮಾರು 3 ಸೆ.ಮೀ ಆಳದ ಗಾಯವಾಗಿದೆ. ನಿನ್ನೆ ಸಂಜೆ 5.30ರ ಸುಮಾರಿಗೆ ಈ ಘಟನೆ ನಡೆದಿದೆ. ನಾಳೆ ಪಾರೂಲ್ ಶಸ್ತ್ರಚಿಕಿತ್ಸೆ ನಡೆಯುವ ಸಾಧ್ಯತೆ ಇದೆ. ನಡುಬೀದಿಯಲ್ಲಿ ನಾಯಿಗಳು ಅಟ್ಯಾಕ್ ಮಾಡಿದರೂ ಯಾರೊಬ್ಬರೂ ಸಹಾಯಕ್ಕೆ ಬಾರದಿರುವ ಬಗ್ಗೆ ಪಾರೂಲ್ ಸಹೋದರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.