`ಕನ್ನಯ್ಯ ದೇಶದ್ರೋಹಿ ಘೋಷಣೆ ಕೂಗಿಲ್ಲ’

ನವದೆಹಲಿ : ಸಂಸತ್ತಿನ ಮೇಲೆ ದಾಳಿ ರೂವಾರಿ ಅಫ್ಜಲ್ ಗುರುವಿನ ಜಯಂತಿಯ ಸಂದರ್ಭದಲ್ಲಿ, 2016ರಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಜವಾಹರಲಾಲ್ ನೆಹ್ರೂ ಯೂನಿವರ್ಸಿಟಿಯ ವಿದ್ಯಾರ್ಥಿ ಕನ್ನಯ್ಯ ಕುಮಾರ್ `ಭಾರತ ವಿರೋದಿ’ü ಘೋಷಣೆ ಕೂಗಿಲ್ಲ ಎಂಬುದು ತನಿಖೆಯಿಂದ ಸಾಬೀತಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಈ ಘಟನೆಗೆ ಸಂಬಂಧಿಸಿ ಕುಮಾರ್, ಉಮರ್ ಖಲೀದ್ ಮತ್ತು ಅನಿರ್ಬಾನ್ ಭಟ್ಟಾಚಾರ್ಯ ವಿರುದ್ಧ ದೇಶದ್ರೋಹಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ತನಿಖೆ ವೇಳೆ ಸುಮಾರು 30 ವೀಡಿಯೋ ಮಾದರಿ ಪರೀಕ್ಷಿಸಲಾಗಿದೆ. ಆದರೆ ಭಾರತ ವಿರೋಧಿ ಘೋಷಣೆ ಕೂಗಿದ ಧ್ವನಿಯೊಂದಿಗೆ ಕುಮಾರ್ ಧ್ವನಿ ಹೋಲಿಕೆಯಾಗಿಲ್ಲ ಎಂದು ಹೇಳಲಾಗಿದೆ.