ಕುದುರೆ ಸವಾರಿ ಕಲಿಯುತ್ತಿರುವ ಕಂಗನಾ

ಮುಂಬರುವ ಚಿತ್ರ `ದಿ ಕ್ವೀನ್ ಆಫ್ ಝಾನ್ಸಿ’ ಚಿತ್ರಕ್ಕಾಗಿ ರೆಡಿಯಾಗುತ್ತಿದ್ದಾಳೆ. ಕಂಗನಾ ಯಾವಾಗಲೂ ತನ್ನ ಸಿನಿಮಾಗಾಗಿ ಏನೂ ಮಾಡಲು ತಯಾರಿರುತ್ತಾಳೆ. ಈಗ `ರಾಣಿ ಲಕ್ಷ್ಮೀಭಾಯಿ’ ಪಾತ್ರಕ್ಕಾಗಿ ಕಂಗನಾ ಕುದುರೆ ಸವಾರಿ ಕಲಿಯುತ್ತಿದ್ದಾಳೆ.

ಈ ಸಿನಿಮಾ 18ನೇ ಶತಮಾನದ ಝಾನ್ಸಿಯ ಮರಾಠಾ ರಾಣೀ ಲಕ್ಷ್ಮೀಬಾಯಿಯ ಕುರಿತಾಗಿದ್ದು ತೆಲುಗು ಡೈರೆಕ್ಟರ್ ಕ್ರಿಶ್ ಮನಿಕರ್ಣಿಕಾ ಇದನ್ನು ನಿರ್ದೇಶಿಸಲಿದ್ದಾರೆ. ಈ ಮೊದಲು ಕೇತನ್ ಮೆಹ್ತಾ ಚಿತ್ರದ ಸಾರಥ್ಯ ವಹಿಸಲಿದ್ದಾರೆ ಎಂದು ಹೇಳಲಾಗಿತ್ತಾದರೂ ಕಂಗನಾ ಮತ್ತು ಮೆಹ್ತಾ ನಡುವಿನ ಭಿನ್ನಾಭಿಪ್ರಾಯದಿಂದ ಮೆಹ್ತಾ ನಿರ್ದೇಶನದಿಂದ ಹಿಂದೆ ಸರಿದಿದ್ದಾರೆ.

ಕಂಗನಾ ಈಗ ಕುದುರೆ ಸವಾರಿಯನ್ನು ಸಕತ್ತಾಗಿಯೇ ಪ್ರಾಕ್ಟೀಸ್ ಮಾಡುತ್ತಿದ್ದು ಮುಂಬೈನ ಮಹಾಲಕ್ಷ್ಮೀ ರೇಸ್ ಕೋರ್ಸಿನಲ್ಲಿ ಆಕೆ ಕುದುರೆ ಸವಾರಿ ಮಾಡುತ್ತಿರುವ ವೀಡಿಯೋ ನೋಡಿ ಅವಳ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.