ದೀಪಿಕಾ ಬಚಾವೋಗೆ ಕಂಗನಾ ಸಹಿ ಹಾಕಿಲ್ಲ

`ಪದ್ಮಾವತಿ’ ಚಿತ್ರದ ವಿವಾದದ ಹಿನ್ನೆಲೆಯಲ್ಲಿ ಕೆಲವು ಸಂಘಟನೆಗಳು ಆ ಸಿನಿಮಾದ ಹೀರೋಯಿನ್ ದೀಪಿಕಾ ಪಡುಕೋಣೆಗೆ ಬಹಿರಂಗವಾಗಿಯೇ ಜೀವ ಬೆದರಿಕೆ ಒಡ್ಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ. ಈ ಕುರಿತು ಎಲ್ಲಾ ಸಿನಿಮಾ ಇಂಡಸ್ಟ್ರಿಯವರೂ ಅದನ್ನು ಖಂಡಿಸಿದ್ದು, ಹಿರಿಯ ನಟಿ ಶಬಾನಾ ಆಜ್ಮಿ ದೀಪಿಕಾ ಸುರಕ್ಷತೆಗಾಗಿ `ದೀಪಿಕಾ ಬಚಾವೋ’ ಪಿಟೀಶನ್ ತಯಾರಿಸಿ ಬಿಟೌನಿನ ಎಲ್ಲಾ ಪ್ರಮುಖ ನಟಿಯರ ಸಹಿ ಪಡೆದು ಸರಕಾರಕ್ಕೆ ಕೊಡಲು ಮುಂದಾಗಿದ್ದಾರೆ. ಈ ಸಹಿ ಆಂದೋಲನದಲ್ಲಿ ಹೇಮ ಮಾಲಿನಿ, ಜಯಾ ಬಚ್ಚನ್, ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶರ್ಮಾ, ಆಲಿಯಾ ಭಟ್, ವಿದ್ಯಾ ಬಾಲನ್ ಸಮೇತ ಎಲ್ಲಾ ನಟಿಯರೂ ಈ ಆಂದೋಲದಲ್ಲಿ ಭಾಗಿಯಾಗಿದ್ದರು. ಆದರೆ ದೀಪಿಕಾಳ ಪ್ರತಿಸ್ಪರ್ಧಿಯೆನ್ನಲಾದ ಕಂಗನಾ ರನೌತ್ ಮಾತ್ರ ಈ ಪಿಟಿಶನ್ನಿಗೆ ಸಹಿ ಹಾಕಿಲ್ಲ.

ಈ ಬಗ್ಗೆ ಕಂಗನಾ ಹೇಳುವುದೆಂದರೆ “ದೀಪಿಕಾಳಿಗೆ ನನ್ನ ಬೆಂಬಲ ಇದ್ದರೂ ಈ ಪ್ರಕರಣದ ಬಗ್ಗೆ ನನ್ನದೇ ಆದ ಕೆಲವು ನಿಲುವು ಇದೆ. ಅಷ್ಟೇ ಅಲ್ಲ, ಈ ಆಂದೋಲಕ್ಕೆ ನನ್ನ ಕ್ಯಾರೆಕ್ಟರ್ ಬಗ್ಗೆಯೇ ಲಘುವಾಗಿ ಮಾತಾಡಿರುವವರು ಪ್ರಮುಖರಾಗಿರುವ ಕಾರಣ ನಾನು ಇದಕ್ಕೆ ಸಹಿ ಹಾಕಲ್ಲ” ಎಂದಿದ್ದಾಳೆ.

ಕಂಗನಾ ಹಾಗೂ ಹೃತಿಕ್ ರೋಶನ್ ನಡುವಿನ ವಿವಾದದಲ್ಲಿ ಶಬಾನಾರ ಮಲಮಗ ಫರ್ಹಾನ್ ಅಕ್ತರ್ ಬಹಿರಂಗವಾಗಿಯೇ ಹೃತಿಕ್ ಬೆಂಬಲಕ್ಕೆ ನಿಂತಿದ್ದೇ ಕಂಗನಾ ಈಗ `ದೀಪಿಕಾ ಬಚಾವೋ’ ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿಲ್ಲ ಎನ್ನಲಾಗಿದೆ.