`ಕಂಸ’ನ ಬಣ್ಣ ಬಯಲಾಗಲಿದೆ : ಈಶ್ವರಪ್ಪ ವಿರುದ್ಧ ಯಡ್ಡಿ ಟೀಕೆ

ಬೆಂಗಳೂರು : ಈಶ್ವರಪ್ಪರನ್ನು ಬರ ಅಧ್ಯಯನ ತಂಡದಿಂದ ಕೈಬಿಟ್ಟಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡ್ಡಿಯೂರಪ್ಪ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಿಕೊಂಡಿರುವ ಅವರ (ಈಶ್ವರಪ್ಪ) ವಿರುದ್ಧ ಕ್ರಮದ ಸುಳಿವು ನೀಡಿದ್ದಾರೆ.

ಕೃಷ್ಣನ ಹುಟ್ಟಿನಿಂದ ಕಂಸರಂತಹ ಕೆಲವರಿಗೆ ಭೀತಿ ಉಂಟಾದಂತೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಪ್ರಭಾವದಿಂದಲೂ ಆಗಿದೆ ಎಂದಿರುವ ಈಶ್ವರಪ್ಪರ ಹೇಳಿಕೆಗೆ ಪ್ರತ್ಯುತ್ತರಾಗಿ ಯಡ್ಡಿಯೂರಪ್ಪ, “ಮುಂದಿನ ದಿನಗಳಲ್ಲಿ `ಕಂಸ’ನ ಬಣ್ಣ ಬಯಲಾಗಲಿದೆ” ಎಂದರು.

ಬರಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಯಡ್ಡಿಯೂರಪ್ಪ ತುಮಕೂರಿನಲ್ಲಿ ಶಿವಕುಮಾರ ಸ್ವಾಮಿಯನ್ನು ಭೇಟಿಯಾಗಿದ್ದಾರೆ. ಬ್ರಿಗೇಡಿನಲ್ಲಿ ತುರ್ತಾಗಿರುವುದರಿಂದ ಈಶ್ವರಪ್ಪರನ್ನು ಬರ ತಂಡದಿಂದ ಕೈಬಿಡಲಾಗಿದೆ ಎಂದಷ್ಟೇ ಉತ್ತರಿಸಿದರು.

ಇದೇ ವೇಳೆ ಬಿಜೆಪಿ ಹೈಕಮಾಂಡ್ ಇಬ್ಬರು ನಾಯಕರಿಗೆ ಸಮನ್ಸ್ ನೀಡಲಿದೆ ಎಂದು ಪಕ್ಷ ಮೂಲಗಳು ಹೇಳಿವೆ.