ತಮಿಳಿನ `ಬಿಗ್ ಬಾಸ್’ ಆಗ್ತಾರಾ ಕಮಲ್?

ಹಿಂದಿ, ಕನ್ನಡ ಹಾಗೂ ಇನ್ನೂ ಕೆಲವು ಭಾಷೆಯಲ್ಲಿ ಈಗಾಗಲೇ ಜನ ಮನ್ನಣೆಗಳಿಸಿರುವ `ಬಿಗ್ ಬಾಸ್’ ರಿಯಾಲಿಟಿ ಶೋ, ಈಗ ತಮಿಳಿನಲ್ಲಿಯೂ ಶುರುಮಾಡಲು ಚಿಂತನೆ ನಡೆದಿದ್ದು, ಇದಕ್ಕಾಗಿ ದೊಡ್ಡ ಸ್ಟಾರ್ ನಟನನ್ನು ನಿರೂಪಕನಾಗಿ ಕರೆತರುವ ಸಾಧ್ಯತೆಯಿದೆ. ಈಗ ಹಿಂದಿಯಲ್ಲಿ ಸಲ್ಮಾನ್ ಖಾನ್, ಕನ್ನಡದಲ್ಲಿ ಸುದೀಪ್ `ಬಿಗ್ ಬಾಸ್’ ನಿರೂಪಕರಾಗಿದ್ದರೆ ತಮಿಳಿನಲ್ಲಿ `ಬಿಗ್ ಬಾಸ್’ ಕಮಲ್ ಹಾಸನ್ ಆಗುವ ಸಾಧ್ಯತೆ ನಿಚ್ಚಳವಾಗಿದೆ.

ಈಗಾಗಲೇ ತಮಿಳಿನ ಮೊದಲ ಆವೃತ್ತಿಯ `ಬಿಗ್ ಬಾಸ್’ ಶೋಗೆ ತಯಾರಿಗಳು ಭರದಿಂದ ಸಾಗುತ್ತಿವೆ. ಈ ಮೊದಲ ಸೀಸನ್ನಿನಲ್ಲಿ ರಾಜಕೀಯ ಹಾಗೂ ಚಿತ್ರರಂಗದ ಕೆಲವು ಸೆಲೆಬ್ರಿಟಿಗಳು ಬಿಗ್ ಬಾಸ್ ಮನೆ ಪ್ರವೇಶ ಮಾಡಲಿದ್ದಾರಂತೆ. ಆಯೋಜಕರು ಈ ಶೋ ನಿರೂಪಕರಾಗಿ ಕಮಲ್ ಹಾಸನ್ ಅವರನ್ನು ಕರೆತರಲು ಭಾರೀ ಪ್ರಯತ್ನ ಮಾಡುತ್ತಿದ್ದಾರಂತೆ. ಸದ್ಯ ಗಾಯದ ಸಮಸ್ಯೆಯಿಂದ ವಿಶ್ರಾಂತಿಯಲ್ಲಿರುವ ಕಮಲ್ ಇನ್ನೂ ಕೆಲ ಸಮಯ  ವಿಶ್ರಾಂತಿಯಲ್ಲಿರುವುದು ಅನಿವಾರ್ಯ. ಕೆಲವು ಚಿತ್ರಗಳೂ ಅವರ ಬರವನ್ನು ಕಾಯುತ್ತಿವೆ. ಹಾಗಾಗಿ ಅವರು `ಬಿಗ್ ಬಾಸ್’ ಆಗಲು ಒಪ್ಪಿಕೊಳ್ತಾರಾ, ಅವರು ಸಣ್ಣ ಪರದೆ ಮೇಲೆ ಯಾವ ರೀತಿಯ ಕಮಾಲ್ ಮಾಡಲಿದ್ದಾರೆ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.