ಅಸಹಾಯಕ ವೃದ್ಧಗೆ ಆಶ್ರಯ ಕಲ್ಪಿಸಿದ ಕಲ್ವಾರಿ ವೃದ್ಧಾಶ್ರಮ

ಉಡುಪಿ : ಅಸಹಾಯಕ ವೃದ್ಧನಿಗೆ, ಬದುಕಿನ ಸಂದ್ಯಾಕಾಲ ಕಳೆಯಲು ಹಿರಿಯ ನಾಗರಿಕ ಸಹಾಯವಾಣಿ ಮತ್ತು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ವೃದ್ಧಾಶ್ರಮ ಸೇರಿಸಿದರು.

ಮಣಿಪಾಲ ಪೆÇಲೀಸ್ ಠಾಣಾ ವ್ಯಾಪ್ತಿಯ ನೇತಾಜಿನಗರದಲ್ಲಿ ವಾಸ್ತವ್ಯ ಇದ್ದ, ಈ ಹಿಂದೆ ನಗರದಲ್ಲಿ ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದ, ಸುಂದರ ಪೂಜಾರಿ (65) ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದರು. ಮಾನಸಿಕ ಖಿನ್ನತೆಗೊಳಪಟ್ಟ ಅವರು ಬದುಕಲು ನೆಲೆ ಇಲ್ಲದ ಕಾರಣ, ಮನನೊಂದು ಸಮೀಪದ ಅಕೇಶಿಯಾ ಕಾಡಿನಲ್ಲಿ ಮರದ ಗೆಲ್ಲಿಗೆ ಲುಂಗಿಯನ್ನು ಉರುಳಾಗಿ ಬಳಸಿಕೊಂಡು, ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಆ ಸಂದರ್ಭ ಅದೇ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿಗಳು ನೇಣು ಕುಣಿಕೆಯಿಂದ ರಕ್ಷಸಿ ಸಮೀಪದ ಮನೆಯಲ್ಲಿ ಬಿಟ್ಟು ಹೋಗಿದ್ದರು. ವಿಷಯ ತಿಳಿದು ಸಾಮಾಜಿಕ ಕಾರ್ಯಕರ್ತರಾದ ವಿಶು ಶೆಟ್ಟಿ ಅಂಬಲಪಾಡಿ, ಶಿರೂರು ತಾರಾನಾಥ್ ಮೇಸ್ತ ಜೊತೆಗೂಡಿ ಉಡುಪಿ ಜಿಲ್ಲಾಸ್ಪತ್ರೆಗೆ ಸೆಪ್ಟೆಂಬರ್ 1ರಂದು ಚಿಕಿತ್ಸೆಗಾಗಿ ದಾಖಲು ಪಡಿಸಿದ್ದರು. ಘಟನೆಯ ಬಗ್ಗೆ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿತ್ತು ಮತ್ತು ಹಿರಿಯ ನಾಗರಿಕರ ಸಹಾಯವಾಣಿಗೂ ದೂರು ದಾಖಲಾಗಿತ್ತು.

ಅಸಹಾಯಕ ವೃದ್ಧನ ಹತ್ತಿರದ ಕುಟುಂಬದ ಸದಸ್ಯರೊಂದಿಗೆ ಹಿರಿಯ ನಾಗರಿಕ ಸೇವಾ ಸಂಸ್ಥೆಯ ಸಿಬ್ಬಂದಿ ಸಂಪರ್ಕಿಸಿ ವೃದ್ಧನ ಸಲಹುವ ವಿಚಾರದಲ್ಲಿ ಮಾತುಕತೆ ನಡೆಸಿದ್ದರು. ಮಾತುಕತೆ ಒಮ್ಮತಕ್ಕೆ ಬಾರದ ಕಾರಣ ಉಡುಪಿ ಕೊರಂಗ್ರಪಾಡಿಯಲ್ಲಿರುವ ಕಲ್ವಾರಿ ವೃದ್ಧಾಶ್ರಮದ ಮೇಲ್ವಿಚಾರಕ ಕುಮಾರ್ ಅವರ ಸಹಕಾರದ ಮೇರೆಗೆ ಸುಂದರ ಪೂಜಾರಿಯನ್ನು ಬದುಕಿನ ಸಂದ್ಯಾಕಾಲ ಕಳೆಯಲು ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಳಿಸಿ ಸೆಪ್ಟೆಂಬರ್ 13ರಂದು ವೃದ್ಧಾಶ್ರಮಕ್ಕೆ ದಾಖಲುಪಡಿಸಲಾಯಿತು.

ಕಾರ್ಯಚರಣೆಯಲ್ಲಿ ಸಮಾಜಸೇವಕ ವಿಶು ಶೆಟ್ಟಿ, ಹಿರಿಯನಾಗರಿಕ ಸಾಹಯವಾಣಿ ಸಿಬ್ಬಂದಿ ಭಾಗಿಗಳಾದರು. ಕಲ್ವಾರಿ ಆಶ್ರಮದ ಸಿಬ್ಬಂದಿ ಸಹಕರಿಸಿದರು. ಹಿರಿಯ ನಾಗರಿಕರ ಸುರಕ್ಷಿತೆಗಾಗಿ ಶ್ರಮಿಸುತ್ತಿರುವ ಉಡುಪಿ ಹಿರಿಯ ನಾಗರಿಕ ಸಹಾಯವಾಣಿ ಕಾರ್ಯವೈಖರಿ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಕಲ್ವಾರಿ ಆಶ್ರಮದ ಯಾವುದೇ ಫಲಾಪೇಕ್ಷೆ ಇಲ್ಲದ ಚಟುವಟಿಕೆಗಳಿಗೆ ಆರ್ಥಿಕವಾಗಿ ಸಹಕರಿಸಿದರೆ ಮತ್ತಷ್ಟೂ ಅಸಹಾಯಕ ವೃದ್ಧರಿಗೆ ನೆಲೆ ಕೊಡಲು ಅವರಿಂದ ಸಾದ್ಯತೆ ಇದೆ.