`ಶಾಲಾ ಕಲೋತ್ಸವ ವಿದ್ಯಾರ್ಥಿಗಳ ಪಠ್ಯೇತರ ಪ್ರತಿಭೆ ಗುರುತಿಸುವಲ್ಲಿ ಸಹಕಾರಿಯಾಗಿದೆ’

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : “ಶಾಲಾ ಕಲೋತ್ಸವಗಳು ವಿದ್ಯಾರ್ಥಿಗಳ ಪಠ್ಯೇತರ ಪ್ರತಿಭೆಯನ್ನು ಗುರುತಿಸುವಲ್ಲಿ ಸಹಕಾರಿಯಾಗಿದ್ದು, ಸ್ಪರ್ಧೆ ಧನಾತ್ಮಕತೆಯೊಂದಿಗೆ ಇನ್ನಷ್ಟು ಎತ್ತರಕ್ಕೇರಲು ಸಹಕರಿಸುವುದು” ಎಂದು ಜಿಲ್ಲಾ ಪಂಚಾಯತಿ ಅಭಿವೃದ್ಧ ಸ್ಥಾಯೀ ಸಮಿತಿ ಅಧ್ಯಕ್ಷೆ ಫರೀದಾ ಝಾಕೀರ್ ಹೇಳಿದರು.

ಉಪ್ಪಳ ಸರಕಾರಿ ಶಾಲೆಯಲ್ಲಿ ಐದು ದಿನಗಳ ಕಾಲ ನಡೆದ ಮಂಜೇಶ್ವರ ಉಪ ಜಿಲ್ಲಾ ಶಾಲಾ ಕಲೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸರಕಾರ ಇಂದು ವಿದ್ಯಾಭ್ಯಾಸದ ಜೊತೆಗೆ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪೆÇ್ರೀತ್ಸಾಹಿಸುವಲ್ಲಿ ನೀಡುತ್ತಿರುವ ಮಹತ್ವದ ಫಲವಾದ ಕಲೋತ್ಸವಗಳು ಗ್ರಾಮೀಣ ಮಟ್ಟದ ಯುವ ಪ್ರತಿಭೆಗಳಿಗೆ ಅವಕಾಶವಾಗಿದೆ ಎಂದು ತಿಳಿಸಿದ ಅವರು ಶಿಕ್ಷಕರು, ಮಕ್ಕಳ ಪೆÇೀಷಕರ ಸಹಕಾರದೊಂದಿಗೆ ನಡೆದ ಕಲೋತ್ಸವ ಹೊಸ ಹುರುಪು ಮೂಡಿಸಲಿ ಎಂದು ಹಾರೈಸಿದರು. ಈ ಸಂದರ್ಭ ಶಾಲಾ ಅಧ್ಯಾಪಕರುಗಳ ಸಹಿತ ಹಲವಾರು ಮಂದಿ ಪಾಲ್ಗೊಂಡರು.