ಕಲ್ಲಕಡಂಬಿ ಕಾಲೊನಿ ಜನಕ್ಕೆ ಕುಡಿಯುವ ನೀರು ಸಂಪರ್ಕ

ಕಾಸರಗೋಡು : ಶುದ್ಧ ಕುಡಿಯುವ ನೀರು ಸಮಸ್ಯೆಯಿಂದ ಕೂಡಿದ ಕುಂಬ್ಡಾಜೆ ಪಂಚಾಯಿತಿಯ ಕಲ್ಲಕಡಂಬಿ ಪರಿಶಿಷ್ಟ ಜಾತಿ ಕಾಲೊನಿಗೆ ಹಲವು ವರ್ಷಗಳ ಬಳಿಕ ಕುಡಿಯುವ ನೀರು ಸಂಪರ್ಕ ಲಭಿಸಿದೆ.

ಗ್ರಾಮ ಪಂಚಾಯತಿನ 2015-16ನೇ ಸಾಲಿನ ಯೋಜನೆಯಲ್ಲಿ ಅಳವಡಿಸಿ ಪರಿಶಿಷ್ಟ ಜಾತಿ ಕಾಲೊನಿಯ ಕೊಳವೆ ಬಾವಿಗೆ ಮೋಟರ್, ಟ್ಯಾಂಕ್ ಅಳವಡಿಸಿ ಪೈಪುಲೈನ್ ಮೂಲಕ ಐದು ಕುಟುಂಬಗಳಿಗೆ ಕುಡಿಯುವ ನೀರು ಸಂಪರ್ಕ ಕಲ್ಪಿಸಲಾಯಿತು.

ಕಾಲೊನಿಯಲ್ಲಿ ಕುಡಿಯುವ ಸಂಪರ್ಕಕ್ಕೆ ಪಂ ಸದಸ್ಯ ಶಶಿಧರ ಟಿ ಚಾಲನೆ ನೀಡಿದರು. ಈ ಸಂದರ್ಭ ಹಲವಾರು ಕಾಲೊನಿವಾಸಿಗಳು ಉಪಸ್ಥಿತರಿದ್ದರು.