ಕೇಂದ್ರದ ವಿದೇಶಾಂಗ, ರಕ್ಷಣಾ ನೀತಿ ಸಮರ್ಥಿಸಿದ ಕಲ್ಲಡ್ಕ ಭಟ್

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ದೇಶದ ವಿದೇಶಾಂಗ ನೀತಿ ಹಾಗೂ ರಕ್ಷಣಾ ನೀತಿ ಸ್ಪಷ್ಟವಾಗಿದ್ದರೆ, ಉಳಿದೆಲ್ಲ ವಿಷಯಗಳೂ ನಗಣ್ಯವಾಗಿದೆ ಎಂದು ಆರೆಸ್ಸೆಸ್ ಮುಖಂಡ ಡಾ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.

ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ನೋಟು ಅಮಾನ್ಯ ಕ್ರಮದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ದೇಶದ ಆಂತರಿಕ ವಿಷಯಗಳೇನಿದ್ದರೂ ದೇಶದ ಒಳಗೆ ಸರಿಪಡಿಸಿಕೊಳ್ಳಲು ಅವಕಾಶವಿದೆ. ದೇಶದ ಭದ್ರತೆ ವಿಷಯದಲ್ಲಿ ಮಾತ್ರ ಕಠಿಣ ಕ್ರಮ ಅಗತ್ಯವಿದೆ” ಎನ್ನುವ ಮೂಲಕ ಮೋಟು ಅಮಾನ್ಯ ಕ್ರಮ ಸಮಪರ್ಕವಾಗಿದೆ ಎಂದು ಸಮರ್ಥಿಸಿಕೊಳ್ಳಲು ಹಿಂದೇಟು ಹಾಕಿದರು.

“ನೋಟು ಅಮಾನ್ಯ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಎಲ್ಲ ಬದಲಾವಣೆ ಕಾರ್ಯಗಳನ್ನು ದೇಶದ ಜನ ತ್ವರಿತವಾಗಿ ಸ್ವೀಕರಿಸುತ್ತಿದ್ದಾರೆ. ನೋಟು ಅಮಾನ್ಯ ಕ್ರಮಕ್ಕೂ ಜನ ಸಾಮಾನ್ಯರು ಶೀಘ್ರ ಹೊಂದಿಕೊಂಡಿದ್ದಾರೆ. ಭ್ರಷ್ಟರಿಗೆ ಹಾಗೂ ಕಪ್ಪು ಹಣದ ಕುಳಗಳಿಗೆ ಮಾತ್ರ ಅವು ನುಂಗಲಾರದ ತುತ್ತಾಗಿದೆ” ಎಂದ ಡಾ ಭಟ್ ಇದುವರೆಗೂ ನರೇಂದ್ರ ಮೋದಿ ಉತ್ತಮ ರೀತಿಯಲ್ಲೇ ಮುನ್ನಡೆಯುತ್ತಿದ್ದಾರೆ ಎಂದೇ ತೋರಿ ಬರುತ್ತಿದೆ ಎಂದು ಅಭಿಪ್ರಾಯಪಟ್ಟರು.