ಗೌರಿ ಪ್ರಕರಣದ ತನಿಖೆಯಿಂದ ಕಲಬುರ್ಗಿ ಕೇಸಿಗೆ ಸಹಾಯ ?

ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್ ಹತ್ಯಾ ಪ್ರಕರಣದ ತನಿಖೆಯಿಂದ ಪ್ರಸಕ್ತ ತನಿಖೆಯಲ್ಲಿರುವ ವಿಚಾರವಾದಿ ಎಂಎಂ ಕಲಬುರ್ಗಿ ಹತ್ಯಾ ಪ್ರಕರಣದ ತನಿಖೆಗೆ ಸಹಾಯವಾಗಬಹುದೇ ? ಕಲಬುರ್ಗಿ ಕೇಸಿನ ತನಿಖೆ ನಡೆಸುತ್ತಿರುವ ಸಿಐಡಿ ಪ್ರಸಕ್ತ ಗೌರಿ ಹತ್ಯಾ ಪ್ರಕರಣ ತನಿಖೆ ನಡೆಸುತ್ತಿರುವ ಎಸ್‍ಐಟಿ ಜತೆ ಕೇಸಿನ ಮಾಹಿತಿ-ವಿಚಾರ ವಿನಿಮಯ ಮಾಡಿಕೊಳ್ಳುತ್ತಿದೆ ಎಂದು ಅಧಿಕೃತ ಮೂಲಗಳು ಹೇಳಿವೆ. “ಎರಡೂ ಹತ್ಯೆಗೆ ಹೋಲಿಕೆ ಇದೆಯೇ ಎಂಬುದನ್ನು ಪತ್ತೆ ಹಚ್ಚಲು ಈ ತಂಡಗಳು ಪ್ರಯತ್ನಿಸುತ್ತಿವೆ. ಆದರೆ ಈಗ ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ಏನೂ ಹೇಳುವಂತಿಲ” ಎಂದು ಅಧಿಕಾರಿಯೊಬ್ಬರು ತಿಳಿಸಿದರು. “ಎರಡೂ ಕೇಸಿನಲ್ಲಿ ಒಂದಷ್ಟು ಹೋಲಿಕೆ ಕಂಡು ಬಂದಿದೆ. ಒಂದು ಕೇಸಿನಲ್ಲಿ ಸುಳಿವು ಸಿಕ್ಕಿದರೆ ಮತ್ತೊಂದು ಕೇಸಿನ ತನಿಖೆ ಸುಲಭವಾಗಲಿದೆ” ಎಂದವರು ಹೇಳಿದರು.