ಕದಂಬೋತ್ಸವ, ಪಂಪ ಪ್ರಶಸ್ತಿ ಪ್ರದಾನ ಬನವಾಸಿಯಲ್ಲೇ ಆಗಲಿದೆ : ಕಾಗೇರಿ

ನಮ್ಮ ಪ್ರತಿನಿಧಿ ವರದಿ

ಶಿರಸಿ : “ನಾಡಿನ ಶ್ರೇಷ್ಠ ಉತ್ಸವವಾದ ಕದಂಬೋತ್ಸವದಷ್ಟೇ ಕರಾವಳಿ ಉತ್ಸವವು ಜಿಲ್ಲೆಯಲ್ಲಿ ಪ್ರಾಮುಖ್ಯತೆ ಪಡೆದಿದೆ. ಸರ್ಕಾರ ಫೆಬ್ರುವರಿಯಲ್ಲಿ ಬನವಾಸಿಯಲ್ಲೇ ಕದಂಬೋತ್ಸವ, ಪಂಪ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಿದೆಯೆಂದು ಸದನದಲ್ಲೇ ಉತ್ತರ ಬಂದಿದೆ” ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಅವರು ಸೋಮವಾರ ಕರಾವಳಿ ಉತ್ಸವದ ಅಂಗವಾಗಿ ಶಿರಸಿ ತಾಲೂಕು ಮಟ್ಟದ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ, “ಜಿಲ್ಲೆಯಲ್ಲಿ ಕಲೆ, ಸಂಸ್ಕøತಿಗೆ ಪೂರಕವಾದ ಉತ್ಸವ ಹೆಚ್ಚು ಆಗುತ್ತಿದ್ದು, ಜಿಲ್ಲೆಯ ಪ್ರತಿಭೆಗಳಿಗೆ ಉತ್ತಮ ವೇದಿಕೆ ಸಿಗುವಂತಾಗಿದೆ. ಕರಾವಳಿ ಉತ್ಸವದ ಅಂಗವಾಗಿ ನಡೆಯುವ ಸ್ಪರ್ಧೆಗಳಲ್ಲಿ ಈ ಭಾಗದ ಮಕ್ಕಳು ಉತ್ತಮ ಪ್ರದರ್ಶನ ನೀಡಿ, ಜಿಲ್ಲಾಮಟ್ಟದಲ್ಲೂ ಪ್ರಶಸ್ತಿ ಗಳಿಸುವಂತಾಗಬೇಕು” ಎಂದರು.