ಪ್ರಮುಖರ ಗೈರಿನ ನಡುವೆ ಸಪ್ಪೆಯಾದ ಕದಂಬೋತ್ಸವ

ನಮ್ಮ ಪ್ರತಿನಿಧಿ ವರದಿ

ಶಿರಸಿ : ರಾಜ್ಯಮಟ್ಟದ ಕದಂಬೋತ್ಸವವು ಪ್ರಮುಖರ ಗೈರಿನಿಂದ ಸಪ್ಪೆಯಾಗಿದ್ದು, ಬಂದ ಕಲಾವಿದರು ಜನರ ಗಮನ ಸೆಳೆಯುವಲ್ಲಿ ಪೂರ್ಣ ಯಶಸ್ವಿಯಾಗದೇ ಹೋದರೂ ತೃಪ್ತಿಕರ ಕಾರ್ಯ ಮಾಡಿರುವುದು ಕಂಡುಬಂತು. ಇದಕ್ಕೆ ರಾಜ್ಯಮಟ್ಟದ ಹೆಸರಲ್ಲಿ ಜಿಲ್ಲಾ ಉತ್ಸವದ ಮೆರುಗು ಬಂದಂತಾಗಿದೆ.

ಶನಿವಾರ ರಾತ್ರಿ ಬೆಂಗಳೂರಿನ ಅರ್ಚನ ಉಡುಪ, ನಗರ ಶ್ರೀನಿವಾಸ ಉಡುಪ ತಂಡದವರು 1 ತಾಸು ತಡವಾಗಿ ಆಗಮಿಸಿ, ಕಾರ್ಯಕ್ರಮ ಆರಂಭಿಸಿದ್ದರಿಂದ ಸೇರಿದ ಜನರಲ್ಲಿ ಸಾಕಷ್ಟು ಜನರು ವಾಪಸ್ಸು ಹೋದರು. ಆದರೂ ಇದ್ದ ಜನರನ್ನು ರಂಜಿಸುವಲ್ಲಿ ಇವರು ಸಫಲರಾದರು. ಬೆಂಗಳೂರಿನ ಸೃಷ್ಟಿ ತಂಡದ ಮಹಾನ ಬುದ್ಧ ನೃತ್ಯರೂಪಕ ಪ್ರದರ್ಶನಕ್ಕೆ 30 ನಿಮಿಷ ಅವಕಾಶ ನೀಡಲಾಗಿತ್ತಾದರೂ 45 ನಿಮಿಷವಾದರೂ ಮುಗಿಸದ ಕಾರಣ ಅದನ್ನು ಸ್ಥಗಿತಗೊಳಿಸಲಾಯಿತು.

ಪ್ರಥಮ ದಿನ ವಿವಿಐಪಿ ನಿಗದಿ ಸ್ಥಳದಲ್ಲಿ ಬಹಳ ಬಿಗಿ ನಿಗಾ ಇಡಲಾಯಿತು. ಶನಿವಾರ ಎಲ್ಲರೂ ವಿವಿಐಪಿಯಾದದ್ದು ಜನರಿಗೂ ಗೊಂದಲ ತಂದಿತು. ಅಲ್ಲಿಯ ವಾತಾವರಣ ನೋಡಿದರೆ ರಾಜ್ಯಮಟ್ಟದ ಉತ್ಸವವಾಗದೇ ಜಿಲ್ಲಾಮಟ್ಟದ ಉತ್ಸವದಂತೆ ಕಂಡುಬಂತು. ಶಿರಸಿ, ಸೊರಬ, ಹಾವೇರಿ ಬಿಟ್ಟರೆ ಉಳಿದ ಕಡೆಯಿಂದ ಬಂದ ಜನರು ಸಂಖ್ಯೆ ಕಡಿಮೆ ಇದ್ದರು. ಇನ್ನೊಂದು ಕಾಟಾಚಾರದ ಕದಂಬೋತ್ಸವ ಮುಕ್ತಾಯವಾಯಿತು.

LEAVE A REPLY