ಪಡುಬಿದ್ರಿ ಪೇಟೆ ರಸ್ತೆ ವಿಭಾಜಕ ಸಮಸ್ಯೆಗೆ ಮುಕ್ತಿ

`ಕರಾವಳಿ ಅಲೆ’ ವರದಿಗೆ ಸ್ಪಂದಿಸಿದ ಪಡುಬಿದ್ರಿ ಪೊಲೀಸ್

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಪಡುಬಿದ್ರಿ ಪೇಟೆಯ ಸಂಚಾರ ಅವ್ಯವಸ್ಥೆಗೆ ತಾತ್ಕಾಲಿಕ ಪರಿಹಾರ ಎಂಬಂತೆ ರಸ್ತೆ ವಿಭಾಜಕ ನಿರ್ಮಿಸಲಾಗಿದ್ದರೂ ಅದರ ನಿರ್ವಾಹಣೆ ನಡೆಸದಿರುವುದರಿಂದ ಈ ಪ್ರದೇಶ ಅಪಾಯಕಾರಿಯಾಗಿ ಗೊಚರಿಸುತ್ತಿರುವ ಬಗ್ಗೆ ನಿನ್ನೆ ಈ ಪತ್ರಿಕೆಯ ಸ್ಪಂದÀನ ವಿಭಾಗದಲ್ಲಿ ಪ್ರಕಟಗೊಂಡಿದ್ದ ಬರಹಕ್ಕೆ ಸ್ಪಂಧಿಸಿದ ಪೊಲೀಸರು ವಿಭಾಜಕವನ್ನು ಮತ್ತೆ ಹಾಕಿದ್ದಾರೆ.

ಈ ಬಗ್ಗೆ ಮಾತನಾಡಿದ ಪೊಲೀಸರೊಬ್ಬರು, “ಪ್ಲಾಸ್ಟಿಕ್ ಟೇಪಿನಿಂದ ತಾತ್ಕಾಲಿಕ ವಿಭಜಕವನ್ನು ನಿರ್ಮಿಸಿ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ ಕೆಲವೊಂದು ಬಾರಿ ಪಾದಚಾರಿಗಳು ಆ ವಿಭಾಜಕದ ನಡುವೆ ತೂರಿ ರಸ್ತೆ ದಾಟುವ ಸಂದರ್ಭ ಟೇಪ್ ಎಳೆದಾಡುವುದರಿಂದ ಟೇಪ್ ತುಂಡಾಗುವುದು ಒಂದು ಕಡೆಯಾದರೆ, ತಡಾರಾತ್ರಿಯ ಸಮಯ ನಿರಂತರವಾಗಿ ಬಂದು ವಿಭಾಜಗಕ್ಕೆ ಕಟ್ಟಲಾದ ಟೇಪನ್ನು ತುಂಡರಿಸುತ್ತಿದ್ದರು.  ಈ ಬಗ್ಗೆ ರೆಡ್‍ಹ್ಯಾಂಡ್ ಆಗಿ ಒಬ್ಬ ವ್ಯಕ್ತಿಯನ್ನು ಪತ್ತೆ ಹಚ್ಚಲಾಗಿದೆ. ಈ ಬಗ್ಗೆ ಠಾಣಾ ಎಸ್ಸೈ ಗಮನಕ್ಕೆ ತರಲಾಗಿದ್ದು ಅವರು ವಿಚಾರಣೆ ನಡೆಸಲಿದ್ದಾರೆ” ಎಂದಿದ್ದಾರೆ.