ಅಪಾಯಕಾರಿ ವಿದ್ಯುತ್ ಕಂಬ ತೆರವುಗೊಳಿಸಿದ ಮೆಸ್ಕಾಂ

ಹೊಸದಾಗಿ ಹಾಕಲಾದ ವಿದ್ಯುತ್ ಕಂಬಗಳು

ಕರಾವಳಿ ಅಲೆ ಇಂಪ್ಯಾಕ್ಟ್

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ಕಳೆದ ಒಂದು ತಿಂಗಳಿನಿಂದ ಅಪಾಯಕಾರಿ ಸ್ಥಿತಿಯಲ್ಲಿದ್ದ ವಿದ್ಯುತ್ ಕಂಬಗಳು ಹಾಗೂ ಮಕ್ಕಳ ಕೈಗೆಟುಕುವಂತಿದ್ದ ವಿದ್ಯುತ್ ತಂತಿಗಳಿಗೆ `ಕರಾವಳಿ ಅಲೆ’ ವರದಿಯ ಬಳಿಕ ಮೋಕ್ಷ ದೊರಕಿದೆ. ಅಪಾಯಕಾರಿ ವಿದ್ಯುತ್ ತಂತಿಗಳ ಬಗ್ಗೆ `ಕರಾವಳಿ ಅಲೆ’ ಸಚಿತ್ರ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಮೆಸ್ಕಾಂ ಸ್ಪಂದಿಸಿದೆ.

ಸುದ್ದಿ ಪ್ರಕಟವಾದ ದಿನದಂದೇ (ಫೆಬ್ರವರಿ 15ರಂದೇ) ಮೆಸ್ಕಾಂ ಸಿಬ್ಬಂದಿ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದ ಅಲ್ಲದೇ ತಕ್ಷಣವೇ ಹಳೆ ಕಂಬಗಳಿಗೆ ಮೋಕ್ಷ ನೀಡಿ ಹೊಸ ಏಳು ಕಂಬಗಳನ್ನು ಹಾಕಿದ್ದಾರೆ ಮತ್ತು ವಿದ್ಯುತ್ ಸಂಪರ್ಕವನ್ನೂ ಕಲ್ಪಿಸಲಾಗಿದೆ. ಈ ಬಗ್ಗೆ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.