ಜಾನ್ವಿಗಾಗಿ ಇಶಾನ್ ಬಾಲ್ಕನಿಯಿಂದ ಜಂಪ್

ಇನ್ನೇನು ಪ್ರೇಮಿಗಳ ದಿನ ಹತ್ತಿರ ಬಂದೇ ಬಿಟ್ಟಿದೆ. ತಮ್ಮ ಪ್ರೇಮನಿವಾದನೆಗಾಗಿ ಪ್ರೇಮಿಗಳು ಏನೆಲ್ಲ ಕಸರತ್ತು ಮಾಡುವುದು ಗೊತ್ತೇ ಇದೆ. ಇದೀಗ ಆ ದಿನವನ್ನು ನೆನಪಿಸುವ ಘಟನೆಯೊಂದು ಕೆಲವು ದಿನಗಳ ಹಿಂದೆ ನಡೆದಿದೆ.

ಶ್ರೀದೇವಿ-ಬೋನಿ ಕಪೂರ್ ಪುತ್ರಿ ಜಾನ್ವಿ ಕಪೂರ್ ಹಾಗೂ ಶಾಹೀದ್ ಕಪೂರ್ ಅರ್ಧ ಸಹೋದರ ಇಶಾನ್ ಕಟ್ಟರ್ ಮೊದಲಿನಿಂದಲೂ ಸ್ನೇಹಿತರು. ಅವರ ನಡುವೆ ಈಗ ಪ್ರೀತಿಯೂ ಬೆಳೆದು ಎರಡು ವರ್ಷಗಳಿಂದೀಚೆಗೆ ಡೇಟಿಂಗ್ ಕೂಡಾ ಮಾಡುತ್ತಿದ್ದಾರೆ. ಅದಲ್ಲದೇ ಈ ಜೋಡಿ ಈಗ ಕರಣ್ ಜೋಹರ್ ಅವರ `ಧಡಕ್’ ಚಿತ್ರದಲ್ಲಿ ಪ್ರೇಮಿಗಳಾಗಿ ನಟಿಸುತ್ತಿದ್ದು ಮತ್ತಿಷ್ಟು ಕ್ಲೋಸ್ ಆಗಿದ್ದಾರೆ. ಆಗೀಗ ಅವರು ಪಾರ್ಟಿ, ಪ್ರೀಮಿಯರ್ ಶೋ, ಡಿನ್ನರ್ ಡೇಟ್ ಹೀಗೆ ಹಲವು ಬಾರಿ ಜೊತೆಯಾಗಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.  ಇದೀಗ ಮೂರ್ನಾಲ್ಕು ದಿನಗಳ ಹಿಂದೆ ಇಶಾನ್ ಜಿಮ್ ಬಳಿ ಜಾನ್ವಿ ಆತನನ್ನು ಪಿಕಪ್ ಮಾಡಲು ಕಾರಿನಲ್ಲಿ ತೆರಳಿದ್ದಳು. ಅದನ್ನರಿತ ಸಾರ್ವಜನಿಕರು ಹಾಗೂ ಫೊಟೋಗ್ರಾಫರ್ಸ್ ಇವರ ದರ್ಶನಕ್ಕಾಗಿ ಹೊರಗಡೆ ಕಾಯುತ್ತಿದ್ದರು. ಈ ವಿಷಯ ಗೊತ್ತಾಗಿ ಎಲ್ಲರ ಕಣ್ಣು ತಪ್ಪಿಸಲು ಇಶಾನ್ ಲಿಫ್ಟ್ ಯಾ ಮೆಟ್ಟಿಲು ಬಳಸದೇ ಡೈರೆಕ್ಟಾಗಿ ಜಿಮ್‍ನ ಕಟ್ಟಡದ ಬಾಲ್ಕನಿಯಿಂದಲೇ ಜಂಪ್ ಮಾಡಿದ್ದಾನೆ. ಆದರೆ ಇದನ್ನು ಕೂಡಾ ಕೆಲವರು ತಮ್ಮ ಮೊಬೈಲಿನಲ್ಲಿ ಸೆರೆಹಿಡಿದಿದ್ದು ಆ ಫೊಟೋವೀಗ ವೈರಲ್ ಆಗಿದೆ. ಅಂತೂ ಇಶಾನ್ ನಿಜಜೀವನದಲ್ಲೂ ಈ ರೀತಿ ಹೀರೋಗಿರಿ ಮೆರೆದಿದ್ದು ಈಗ ಬಿಟೌನಿನ ಹಾಟ್ ಟಾಪಿಕ್ ಆಗಿದೆ.

LEAVE A REPLY