ಸೆನ್ಸಾರ್ ಮಂಡಳಿಯ ನಿಹಲಾನಿಗೆ ಕೊಕ್, ನೂತನ ಅಧ್ಯಕ್ಷ ಜೋಶಿ

ನವದೆಹಲಿ : ಕೇಂದ್ರೀಯ ಚಿತ್ರ ಸೆನ್ಸಾರ್ ಮಂಡಳಿ(ಸಿಬಿಎಫ್‍ಸಿ) ಅಧ್ಯಕ್ಷ ಪಹಲಾಜ್ ನಿಹಲಾನಿಯನ್ನು ಉಚ್ಛಾಟಿಸಿ, ಆ ಸ್ಥಾನಕ್ಕೆ ಖ್ಯಾತ ಗೀತೆ ರಚನೆಗಾರ ಪ್ರಸೂನ್ ಜೋಶಿಯನ್ನು ನಿಯುಕ್ತಿಗೊಳಿಸಲಾಗಿದೆ ಎಂದು ನಿನ್ನೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಪ್ರಕಟಣೆ ಹೊರಡಿಸಿದೆ. ನಿಹಲಾನಿ ತನ್ನ ಅಧಿಕಾರವಾಧಿಯಲ್ಲಿ ಹಲವು ವಿವಾದಗಳಿಗೆ ಕಾರಣರಾಗಿದ್ದರು.