ಜ 26-28 ಮಡ್ಗಾಂವ್ ಇಂಟರಸಿಟಿ ರೈಲು ರದ್ದು

ಜೋಕಟ್ಟೆ-ಪಣಂಬೂರು ದ್ವಿಹಳಿ ಕಾಮಗಾರಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಜೋಕಟ್ಟೆ ಮತ್ತು ಪಣಂಬೂರು ಮಧ್ಯೆ ದ್ವಿಹಳಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು-ಮಡ್ಗಾಂವ್ ಇಂಟರಸಿಟಿ ಎಕ್ಸಪ್ರೆಸ್ ರೈಲು ಸಂಚಾರವನ್ನು ಜ 26ರಿಂದ 28ರವರೆಗೆ ರದ್ದುಪಡಿಸಲಾಗಿದೆ.

ಕಾಸರಗೋಡು-ಬೈಂದೂರು ಪ್ಯಾಸೆಂಜರ್ ರೈಲು ಜ 27ರಿಂದ 29ರವರೆಗೆ ಮಂಗಳೂರು ಜಂಕ್ಷನುವರೆಗೆ ಸಂಚರಿಸಲಿದೆ.

ಮಡ್ಗಾಂವ್-ಮಂಗಳೂರು ಡೆಮು ರೈಲು ಜ 27 ಮತ್ತು 28ರಂದು ಸುರತ್ಕಲಿನವರೆಗೆ ಹಾಗೂ ಯಶವಂತಪುರ-ಕಾರವಾರ ಎಕ್ಸಪ್ರೆಸ್ ರೈಲು ಜ 28ರಂದು ಮಂಗಳೂರು ಜಂಕ್ಷನಿನಲ್ಲಿ ನಿಲುಗಡೆಯಾಗಲಿದೆ.

ಬಿಕನೇರ್-ಕೊಯಂಬತ್ತೂರು ಎಸಿ ಎಕ್ಸಪ್ರೆಸ್ ರೈಲು ಹಾಗೂ ಕಾರವಾರ-ಬೆಂಗಳೂರು ರೈಲು ಜ 27ರಂದು ತೋಕೂರು ನಿಲ್ದಾಣದಲ್ಲಿ 45 ನಿಮಿಷಗಳ ಕಾಲ ನಿಲುಗಡೆಯಾಗಲಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.