`ಹೆಗ್ಗಡೆ ಅವ್ಯವಹಾರ ಬಗ್ಗೆ ಸಂವಾದಕ್ಕೆ ಸಿದ್ಧರಿದ್ದೇವೆ’

ಸಾಂದರ್ಭಿಕ ಚಿತ್ರ

ಜಂಟಿ ಕ್ರಿಯಾ ಸಮಿತಿ ಸವಾಲು

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ:  ಡಿ ವೀರೇಂದ್ರ ಹೆಗ್ಗಡೆ ಕುಟುಂಬ ಮತ್ತು ಅವರ ಸಂಸ್ಥೆಗಳ ಕಾನೂನುಬಾಹಿರ ಕೃತ್ಯಗಳನ್ನು `ಧವರ್iಸೂಕ್ಷ’್ಮ ಮತ್ತು `ಅನಾವರಣ’ ಪುಸ್ತಕದಲ್ಲಿ  ಪ್ರಕಟಿಸಿ ವಿತರಿಸಲಾಗಿದ್ದು ಪುಸ್ತಕಗಳ ಎಲ್ಲಾ ಪ್ರತಿಗಳು  ಖಾಲಿಯಾಗಿದೆ. ಹಾಗೂ ಯಾವುದೇ ಸಾರ್ವಜನಿಕ ವೇದಿಕೆಯಲ್ಲಿ ಸಚಿವರು, ಶಾಸಕರು, ಸಂಸದರ ಸಮ್ಮುಖದಲ್ಲಿ ಹೆಗ್ಗಡೆ ಸಂಸ್ಥಾನದ ಅವ್ಯವಹಾರಗಳ ಕುರಿತು ವೀರೇಂದ್ರ ಹೆಗ್ಗಡೆಯವರೊಂದಿಗೆ ಸಂವಾದಕ್ಕೆ ನಾವು ದಾಖಲೆ ಸಹಿತ  ಸಿದ್ಧರಿದ್ದೇವೆ ಎಂದು  `ಅನಾವರಣ’ದಲ್ಲಿ ಪ್ರಕಟಿಸಿ ಜಂಟಿ ಕ್ರಿಯಾ ಸಮಿತಿ  ಸವಾಲೆಸೆದಿದೆ.

ಬೆಳ್ತಂಗಡಿ ಜೆ ಎಂ ಎಫ್ ಸಿ  ಕೋರ್ಟಿನಲ್ಲಿ ರಂಜನ್ ರಾವ್ ಯರ್ಡೂರ್ ದಾಖಲಿಸಿದ 3 ಕ್ರಿಮಿನಲ್ ಖಾಸಗಿ ದೂರುಗಳ ವಿವರ ಮತ್ತು ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಮತ್ತಿತರರ ಮೇಲಿನ ಕೇಸುಗಳು ಕೋರ್ಟಿನಲ್ಲಿ ವಜಾ ಆಗಿರುವ ವಿವರ ಈ ಕರಪತ್ರದಲ್ಲಿ  ಪ್ರಕಟಿಸಿದೆ.

“ಇದರಲ್ಲಿ 12 ಹುಸಿ ಪ್ರಚಾರ ಮತ್ತು ವಾಸ್ತವಗಳನ್ನು ಪ್ರಕಟಿಸಿ ಸತ್ಯವನ್ನು ಬಿಚ್ಚಿಟ್ಟಿದ್ದೇವೆ. ಹೆಗ್ಗಡೆ ಸಂಸ್ಥಾನ ಸ್ವಚ್ಛ ಮತ್ತು ಅವರು ಪ್ರಶ್ನಾತೀತರು ಎಂಬ ಪೂರ್ವನಿರ್ಧಾರಿತ ಭ್ರಮೆಯಿಂದ ಜನಪ್ರತಿನಿಧಿಗಳು ಹೊರಬಂದು ಸತ್ಯವನ್ನು ಮನಗಂಡು ಅವರ ವಿರುದ್ಧ ನಡೆಯುತ್ತಿರುವ ಹಲವು ಹಗರಣಗಳ  ತನಿಖೆಗಳನ್ನು ತೀವ್ರಗೊಳಿಸಲು ಸರಕಾರಿ ಅಧಿಕಾರಿಗಳನ್ನು ಒತ್ತಾಯಿಸಬೇಕು” ಎಂದು ಜಂಟಿ ಕ್ರಿಯಾ ಸಮಿತಿ ತಿಳಿಸಿದೆ.