ಬಾಲಿವುಡ್ಡಿಗೆ ಜೆಕೆ, ಗೌಹಾರ್ ಖಾನ್ ನಾಯಕಿ

`ಅಶ್ವಿನಿ ನಕ್ಷತ್ರ’ ಧಾರಾವಾಹಿಯ ಸೂಪರ್ ಸ್ಟಾರ್ ಜೆಕೆ ಮತ್ತೆ `ಬಿಗ್ ಬಾಸ್ ಕನ್ನಡ 5’ನೇ ಆವೃತ್ತಿಯಲ್ಲಿಯೂ ಭಾಗವಹಿಸಿ ಕನ್ನಡಿಗರೆಲ್ಲರ ಮನ ಗೆದ್ದಿದ್ದಾನೆ. ಈತ ಈಗ ಸಿನಿಮಾದಲ್ಲಿಯೂ ನಟಿಸುತ್ತಿದ್ದಾನೆ. ಕನ್ನಡ ಮಾತ್ರವಲ್ಲದೇ ಬಾಲಿವುಡ್ಡಿನಿಂದಲೂ ಜೆಕೆ ಆಫರ್ ಪಡೆಯುತ್ತಿದ್ದಾನೆ.

ಜೆ.ಕೆ ಅಭಿನಯದ `ಮೇ 1′ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಇನ್ನು ನಿರ್ದೇಶಕ ದಯಾಳ್ ನಿರ್ದೇಶನ ಮಾಡಲಿರುವ 2 ಚಿತ್ರಗಳಿಗೂ ಜೆಕೆ ನಾಯಕ. ಇದಲ್ಲದೇ ಜೆಕೆಗೆ ಹಿಂದಿ ಸಿನಿಮಾಗೂ ಆಫರ್ ಬರುತ್ತಿದೆ. ಈಗಾಗಲೇ `ಸಿಯಾ ಕಾ ರಾಮ್’ ಧಾರವಾಹಿಯಲ್ಲಿ ರಾವಣನ ಪಾತ್ರವನ್ನು ಮಾಡಿರುವ ಜೆ.ಕೆ ರಮೇಶ್ ತಲ್ವಾರ್ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾನೆ. ಈ ಚಿತ್ರದಲ್ಲಿ ಹಾಟ್ ಬೆಡಗಿ ಗೌಹಾರ್ ಖಾನ್ ನಾಯಕಿ ಎನ್ನಲಾಗಿದೆ. ಚಿತ್ರ ಮುಂದಿನ ತಿಂಗಳು ಸೆಟ್ಟೇರಲಿದೆ.

ಇದಲ್ಲದೇ ಜೆಕೆ ಕೃಷ್ಣ ಅಭಿಷೇಕ್ ಜೊತೆಯೂ ಇನ್ನೊಂದು ಚಿತ್ರ ಮಾಡಲಿದ್ದು ಅದನ್ನು ದಿನಕರ್ ಕಪೂರ್ ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ.

 

 

LEAVE A REPLY