ಮಾತು ತಪ್ಪಿದ ಗೆಳತಿ : ಇರಿದುಕೊಂಡ ಪ್ರೇಮಿ

ಸಾಂದರ್ಭಿಕ ಚಿತ್ರ

ಬಳ್ಳಾರಿ : ಪ್ರೇಮಿಗಳ ದಿನಾಚರಣೆಯಂದು ಕೊಟ್ಟ ಮಾತಿನಂತೆ ತನ್ನನ್ನು ಭೇಟಿ ಮಾಡದ ಪ್ರೇಯಸಿಯ ಕೃತ್ಯದಿಂದ ಮನನೊಂದ ಭಗ್ನ ಪ್ರೇಮಿ ತನ್ನನ್ನು ತಾನೇ ಇರಿದುಕೊಂಡಿದ್ದಾನೆ. ಘಟನೆ ಹೊಸಪೇಟೆಯಲ್ಲಿ ನಡೆದಿದೆ. ಹಗರಿಬೊಮ್ಮನಹಳ್ಳಿ ನಿವಾಸಿ ವೀರೇಶ್ ಈ ಭಗ್ನಪ್ರೇಮಿ. ಹೊಸಪೇಟೆಯಲ್ಲಿರುವ ಬಾಡಿಬಿಲ್ಡಿಂಗ್ ಜಿಮ್‍ನಲ್ಲಿ ಮಾರ್ಗದರ್ಶಕನಾಗಿರುವ ವಿರೇಶ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಇಬ್ಬರೂ ಪ್ರೇಮಿಗಳ ದಿನಾಚರಣೆಯಂದು ಸಂಧಿಸುವ ನಿರ್ಧಾರಕ್ಕೆ ಬಂದಿದ್ದರು. ಆದರೆ ಪ್ರೇಮಿ ಬಾರದೇ ಇದ್ದಾಗ ಮನನೊಂದ ವಿರೇಶ್ ತನ್ನನ್ನು ತಾನೇ ಇರಿದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರಿಬ್ಬರೂ ಭಿನ್ನ ಜಾತಿಗೆ ಸೇರಿದವರು ಎಂದು ತಿಳಿದುಬಂದಿದೆ.

 

LEAVE A REPLY