ಜೆಡಿಎಸ್ `ಅಪ್ಪ -ಮಗನ ಪಕ್ಷ ‘ ಎಂದು ಮತ್ತೊಮ್ಮೆ ಸಾಬೀತು

ಬೆಂಗಳೂರು : ನಿನ್ನೆ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಮತ್ತು ಅವರ ಪುತ್ರ ಮಾಜಿ ಸೀಎಂ ಕುಮಾರಸ್ವಾಮಿ ಕ್ರಮವಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಾಧ್ಯಕ್ಷರಾಗಿ ಪುನರ್ ಆಯ್ಕೆಗೊಂಡರು. ಇದರಿಂದ ಜೆಡಿಎಸ್ `ಅಪ್ಪ-ಮಗನ ಪಕ್ಷ’ ಎಂಬುದು ಮತ್ತೊಂದು ಬಾರಿ ಸಾಬೀತಾಯಿತು. ಪಕ್ಷದ ಸಂಘಟನಾ ಚಟುವಟಿಕೆ ವಿಷಯದಲ್ಲಿ ಅಪ್ಪ-ಮಗನಿಂದ ಭಿನ್ನಾಭಿಪ್ರಾಯವಿದ್ದ ಹೊರತಾಗಿಯೂ ಕುಮಾರಸ್ವಾಮಿ ಮತ್ತು ದೇವೇಗೌಡ ಪುನರ್ ಆಯ್ಕೆಗೊಂಡು, ಪಕ್ಷದೊಳಗೆ

ಎರಡನೇ ಹಂತದವರಿಗೆ ನಾಯಕತ್ವ ನಿರಾಕರಿಸಲಾಗಿರುವ ರಹಸ್ಯ ಬಯಲಾಗಿದೆ.

20018ರ ಅಸೆಂಬ್ಲಿ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲು ಎಲ್ಲ ಪ್ರಯತ್ನ ಮಾಡಲಾಗುವುದು ಎಂದು ಈ ನಾಯಕರಿಬ್ಬರೂ ಹೇಳಿದರು.

“ಏಕೈಕ ಪಕ್ಷ ಬಲದಿಂದ ಅಧಿಕಾರವೇರುವುದು ಅಸಾಧ್ಯವಾದಲ್ಲಿ, ನಮ್ಮ ಹಿತೈಷಿಗಳೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬರುವ ಗುರಿ ಹೊಂದಲಾಗಿದೆ. ಅದಕ್ಕಾಗಿ ತಕ್ಷಣದಿಂದ ಪಕ್ಷ ಬಲಪಡಿಸುವ ಕೆಲಸ ಆರಂಭಗೊಳ್ಳಲಿದೆ” ಎಂದು ಕುಮಾರಸ್ವಾಮಿ ತಿಳಿಸಿದರು.