ಡಿಗ್ಗಿ ಭೇಟಿಯಾದ ಜೆಡಿಎಸ್ ಬಂಡುಕೋರ ಶಾಸಕರು

ಬೆಂಗಳೂರು : ಜೆಡಿಎಸ್ಸಿನ ಏಳು ಮಂದಿ ಬಂಡುಕೋರ ಶಾಸಕರ ಪೈಕಿ ಜಮೀರ್ ಅಹ್ಮದ್ ಖಾನ್ ಮತ್ತು ಚೆಲುವರಾಯಸ್ವಾಮಿ ಸಹಿತ ಮೂವರು ನಿನ್ನೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಸೀಎಂ ಸಿದ್ದರಾಮಯ್ಯ ಉಪಸ್ಥಿತರಿದ್ದರು. ಕಳೆದ ವರ್ಷ ನಡೆದಿದ್ದ ರಾಜ್ಯಸಭಾ ಚುನಾವಣೆಯಲ್ಲಿ ಎಂಟು ಮಂದಿ ಜೆಡಿಎಸ್ ಬಂಡುಕೋರ ಶಾಸಕರು ಕಾಂಗ್ರೆಸ್ ಪರವಾಗಿ ಅಡ್ಡ ಮತದಾನ ಮಾಡಿದ್ದರು. ಈ ಶಾಸಕರನ್ನು ಕಾಂಗ್ರೆಸ್ಸಿನೊಳಗೆ ಸೇರಿಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಹಸಿರು ನಿಶಾನೆ ತೋರಿಸಿದೆ ಎಂದು ಪಕ್ಷ ಮೂಲಗಳು ಹೇಳಿವೆ.