ಐಯ್ಯಂಗಾರ್ ಸಂಪ್ರದಾಯದಂತೆ ಜಯಾ ಮರು ಅಂತ್ಯಕ್ರಿಯೆ !

AIADMK leader Jayaram Jayalalitha dies at Apollo Hospital

ಶ್ರೀರಂಗಪಟ್ಟಣ :  ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಸಂಬಂಧಿಯೊಬ್ಬರು ಐಯ್ಯಂಗಾರ್ ಸಂಪ್ರದಾಯದಂತೆ ಅವರ ಮರು-ಅಂತ್ಯಕ್ರಿಯೆಯನ್ನು ನಡೆಸಿದ್ದು, ಅಂತೆಯೇ  ದರ್ಭೆಯಿಂದ ಮಾಡಲ್ಪಟ್ಟ  ಗೊಂಬೆಯೊಂದÀನ್ನು ಅವರು ಇಲ್ಲಿನ ಪಶ್ಚಿಮ ವಾಹಿನಿ ಪ್ರದೇಶದಲ್ಲಿ ಚಿತೆಗೇರಿಸಿದ್ದಾರೆ.

ಜಯಲಲಿತಾ ಅವರ ಮಲ ಸಹೋದರ ಎನ್ ಜೆ ವಾಸುದೇವನ್ ಅವರ ಸೋದರ ಸಂಬಂಧಿ ವರದರಾಜನ್ ಎಂಬವರು ಈ ಮರು ಅಂತ್ಯಕ್ರಿಯೆಯನ್ನು ಮೈಸೂರಿನ ಅರ್ಚಕ ರಾಮಾನುಜಂ ಅವರ ಮಾರ್ಗದರ್ಶನದಲ್ಲಿ ನೆರವೇರಿಸಿದರು. 68 ವರ್ಷದ ಕೋಮಲವಲ್ಲಿ (ಜಯಲಲಿತಾ) ಅವರನ್ನು ಪ್ರತಿನಿಧಿಸುವ  ಒಟ್ಟು 68 ಒಣಹುಲ್ಲುಗಳನ್ನು  ಉಪಯೋಗಿಸಿ ಆ ಗೊಂಬೆಯನ್ನು ತಯಾರಿಸಲಾಗಿತ್ತು.  ಮಂತ್ರ ಪಠಣದೊಂದಿಗೆ ಸಂಪ್ರದಾಯವನ್ನು ಆಚರಿಸಲಾಗಿದ್ದು ನಂತರ ಭಸ್ಮವನ್ನು  ಕಾವೇರಿ ನದಿಯಲ್ಲಿ ವಿಲೀನಗೊಳಿಸಲಾಯಿತು. ಆದರೆ ಇಡೀ ಪ್ರಕ್ರಿಯೆಯ ವೇಳೆ ಜಯಲಲಿತಾ ಅವರ ಹೆಸರನ್ನು ಎಲ್ಲ್ಲಿಯೂ ಬಳಸದೆ ಆಕೆಯ ಮೂಲ ಹೆಸರು ಕೋಮಲವಲ್ಲಿ ಮಾತ್ರ ಉಲ್ಲೇಖಿಸಲಾಗಿತ್ತು. ಜಯಲಲಿತಾ ಅವರ ಪಾರ್ಥಿವ ಶರೀರವನ್ನು ಐಯ್ಯಂಗಾರ್ ಸಂಪ್ರದಾಯಕ್ಕೆ ವಿರುದ್ಧವಾಗಿ  ಹೂಳಲಾಗಿತ್ತು ಎಂದು ಹೇಳಿರುವ ಅರ್ಚಕ ರಾಮಾನುಜುನ್ ಆಕೆಯ ಆತ್ಮಕ್ಕೆ ಶಾಂತಿ ಸಿಗುವ ಸಲುವಾಗಿ  ಮರು ಅಂತ್ಯಕ್ರಿಯೆ ಪ್ರಕ್ರಿಯೆಯನ್ನು ನಡೆಸಲಾಯಿತು ಎಂದರು.  ಜಯಲಲಿತಾ ಅವರ ಮಲ ಸಹೋದರ ವಾಸುದೇವನ್ ಅವರ ಲಿಖಿತ ಅನುಮತಿ ಪಡೆದೇ ತಾನು  ಈ ಧಾರ್ಮಿಕ ಪ್ರಕ್ರಿಯೆ ನಡೆಸಿದ್ದೇನೆ ಎಂದು ವರದರಾಜನ್ ಹೇಳಿದ್ದಾರೆ.