ಉಡುಪಿಯಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲು ಜಯನ್ ಮಲ್ಪೆ ಆಗ್ರಹ

ಉಡುಪಿ : “ಭಾರತದಲ್ಲಿ ಯಾವುದಾದರೂ ಪ್ರತಿಮೆಗಳಿಗೆ ಜೀವಯಿದೆ ಎಂದಾದರೆ ಅದು ಸ್ವಾತಂತ್ರ, ಸಮಾನತೆ, ಸಹೋದರತೆಯನ್ನು ಸಾರಿದ ಸಂವಿಧಾನದ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಮಾತ್ರ ಸಾದ್ಯ. ಹಾಗಾಗಿ ಉಡುಪಿ ನಗರದ ಹೃದಯ ಭಾಗದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಬೇಕು” ಎಂದು ಜಿಲ್ಲಾಡಳಿತಕ್ಕೆ ದಲಿತ ಚಿಂತಕ ಜಯನ್ ಮಲ್ಪೆ ಒತ್ತಾಯಿಸಿದ್ದಾರೆ.

ಉಡುಪಿಯ ಸರ್ವಿಸ್ ಬಸ್ ನಿಲ್ದಾಣದ ರಿಕ್ಷ ಚಾಲಕರ ಮಾಲಕರ ವತಿಯಿಂದ ಅಂಬೇಡ್ಕರರ 60ನೇ ಪರಿನಿಬ್ಬಾಣದ ಪ್ರಯುಕ್ತ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ, “ ಬೀದಿ ಗುಡಿಸುವವರ, ಚಪ್ಪಲಿ ಹೊಲಿಯುವವರ ಕೈಯಲ್ಲಿದ ದಲಿತ ಸಂಘಟನೆ ಪ್ರಸ್ತುತ ಅಂಬೇಡ್ಕರ್ರವರ ಹೆಸರು ಹೇಳಿಕೊಂಡು  ಹೋಟ್ಟೆತುಂಬುವವರ ಕೈಯಲ್ಲಿರುವುದರಿಂದ ದಿನಕ್ಕೋಂದು ದಲಿತ ಸಂಘಟನೆಯನ್ನು ಹುಟ್ಟುಹಾಕಿ ಚಳವಳಿಯ ದಿಕ್ಕುತಪ್ಪಿಸುತ್ತಿರುವುದು ದುರಂತ” ಎಂದರು.

“ಅಂಬೇಡ್ಕರ್ ಮಾನವ ಕುಲದ ದಾರಿದೀಪ. ಸಂವಿಧಾನವೇ ಭಾರತದ ಧರ್ಮವಾಗಲಿ ಹಾಗೂ ಜಾತಿವಿನಾಶಕ್ಕೆ ಜಾತಿವಿರೋಧಿ ಶಕ್ತಿಗಳ ಒಗ್ಗೂಡುವಿಕೆ ಅನಿವಾರ್ಯ” ಎಂದರು.

ಕಾರ್ಯಕ್ರಮದ ಅಧಕ್ಷತೆಯನ್ನು ರಿಕ್ಷಾ ಚಾಲಕರ ನಿಲ್ದಾಣದ ನಾಯಕ ರಮೇಶ್ ಕಾಡಬೆಟ್ಟು ವಹಿಸಿದ್ದರು.