ಜಯಲಲಿತಾರನ್ನು ಅಪರಾಧಿಯೆಂದು ಘೋಷಿಸುವುದಿಲ್ಲ ಎಂದ ಸುಪ್ರೀಂ

ನವದೆಹಲಿ :  ಅಕ್ರಮ ಆಸ್ತಿ ಪ್ರಕರಣದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಅಪರಾಧಿ ಎಂದು ಘೋಷಿಸ ಬೇಕೆಂದು ಕರ್ನಾಟಕ ಸರಕಾರ ಸಲ್ಲಿಸಿದ್ದ  ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಳ್ಳಿ ಹಾಕಿದೆ. “ಜಯಲಲಿತಾ ಅವರನ್ನು ಅಪರಾಧಿಯೆಂದು ಘೋಷಿಸಲಾಗುವುದಿಲ್ಲ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಜಯಲಲಿತಾ ಅವರ ವಿರುದ್ಧ ದಾಖಲಾಗಿದ್ದ ರೂ 66 ಕೋಟಿ ಅಕ್ರಮ ಆಸ್ತಿ ಪ್ರಕರಣವು ಕಳೆದ ವರ್ಷದ ಡಿಸೆಂಬರ್ 5ರಂದು ಆಕೆಯ ಸಾವಿನ ನಂತರ ಊರ್ಜಿತವಾಗುವುದಿಲ್ಲ ಎಂದು ಫೆಬ್ರವರಿ 14ರಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರಕಾರ ಕಳೆದ ತಿಂಗಳು ಸುಪ್ರೀಂ ಕೋರ್ಟಿಗೆ  ಮೇಲ್ಮನವಿ ಸಲ್ಲಿಸಿತ್ತು.ಈ ಮೂಲಕ ಪ್ರಕರಣಕ್ಕಾಗಿ ತಾನು ವ್ಯಯಿಸಿದ ಸುಮಾರು 100 ಕೋಟಿ ರೂಪಾಯಿಯನ್ನು ದಂಡ ರೂಪದಲ್ಲಿ  ಹಿಂದಿರುಗುವಂತೆ ಮಾಡಬೇಕೆಂಬ ಕರ್ನಾಟಕ ಸರಕಾರದ ಉದ್ದೇಶ ಕೂಡ ಕೈಗೂಡಿಲ್ಲ.