ಜಯಲಲಿತಾಗೆ ಹಲವು ಸ್ನೇಹಿತರಿದ್ದರು, ಆದರೆ ಯಾವ ಸ್ನೇಹವೂ ಹೆಚ್ಚು ಕಾಲ ಬಾಳಿರಲಿಲ್ಲ

ತಮಿಳುನಾಡಿನ `ಅಮ್ಮ’ ಎಐಎಡಿಎಂಕೆ ನಾಯಕಿ ಜೆ ಜಯಲಲಿತಾ ಈಗ ನೆನಪು ಮಾತ್ರ.  ಜಯಲಲಿತಾ ಅವರ ಚಿತ್ರ ಜೀವನ ಹಾಗೂ ರಾಜಕೀಯ ಜೀವನದಲ್ಲಿ ಆಕೆ ಹಲವಾರು ಮಂದಿಯೊಂದಿಗೆ ಕೆಲಸ ಮಾಡಿದ್ದರೂ ಅವರಲ್ಲಿ ಹೆಚ್ಚಿನವರೊಂದಿಗೆ ಆಕೆ ಉತ್ತಮ ಬಾಂಧವ್ಯ ಇರಿಸಿಕೊಳ್ಳಲೇ ಇಲ್ಲ.

ತನ್ನ ಚಿತ್ರ ಜೀವನದ ಆರಂಭದಲ್ಲಿ ಆಕೆ `ಫಿಲ್ಮ್ ನ್ಯೂಸ್’ ಆನಂದನ್ ಅವರನ್ನು ತನ್ನ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ  ನೇಮಿಸಿದ್ದರು. ದಕ್ಷಿಣದ ನಟರಲ್ಲಿ ತಮಗಾಗಿ ಪ್ರತ್ಯೇಕ ಪಿ ಆರ್ ಒ ನೇಮಿಸಿದ ಪ್ರಥಮ ವ್ಯಕ್ತಿ ಆಕೆಯಾಗಿದ್ದರು. ಜಯಲಲಿತಾ  ಹಾಗೂ ಆನಂದನ್ ಉತ್ತಮ ಸ್ನೇಹಿತರಾಗಿದ್ದರು. 2013ರಲ್ಲಿ ಜಯಲಲಿತಾ ಅವರು ತಮಿಳು ಸಿನಿಮಾ ರಂಗದ ಇತಿಹಾಸದ ಕುರಿತು ಆನಂದನ್ ಅವರು ಬರೆದ ಕೃತಿಯೊಂದನ್ನು ಪ್ರಕಾಶಿಸಲು ಹಣಕಾಸು ಸಹಾಯ ಒದಗಿಸಿದ್ದರು.

ಆಕೆ ರಾಜಕೀಯ ರಂಗ ಪ್ರವೇಶಿಸಿದಾಗ  ಹಿರಿಯ ಪತ್ರಕರ್ತ ಸೊಲೈ ಅವರ ವಿಶ್ವಾಸ ಗೆದ್ದಿದ್ದರು. ಜಯಲಲಿತಾ ಅವರಿಗಾಗಿ ಕೆಲಸ ನಿರ್ವಹಿಸುವಂತೆ ಸೊಲೈ ಅವರ ಮನವೊಲಿಸಿದವರು ಎಂಜಿಆರ್.  ಎಂಜಿಆರ್ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲು ಸಾಕಷ್ಟು ಸಮಯಾವಕಾಶವಿಲ್ಲದೇ ಇದ್ದುದರಿಂದ  ಅವರು ಜಯಲಲಿತಾ ಅವರನ್ನು  ರಾಜಕೀಯಕ್ಕೆ ಎಳೆದು ತÀರಲು ನಿರ್ಧರಿಸಿದ್ದರೆಂದು ಸೊಲೈ ಅವರು ಜಯಲಲಿತಾ ಅವರ ಜೀವನ ವೃತ್ತಾಂತವನ್ನು  ಬರೆಯುತ್ತಿದ್ದರೆನ್ನಲಾದ ವಾಸಂತಿಯವರಿಗೆ ತಿಳಿಸಿದ್ದರು.

“ಆಕೆಗೆ ಭಾಷಣ ಮಾಡಲು ತರಬೇತಿ ನೀಡುವಂತೆ ಎಂಜಿಆರ್ ನನಗೆ ತಿಳಿಸಿದ್ದರು. ಆಕೆ ಅದರಲ್ಲಿ ಸಫಲರಾದರು. ಆಕೆಯ ಸಭೆಗೆ ಅಗಮಿಸುತ್ತಿದ್ದ ಜನಜಂಗುಳಿಯನ್ನು ನೋಡಿ ಡಿಎಂಕೆಗೆ ಆಶ್ಚರ್ಯವಾಗಿತ್ತು. ಎಂ ಕರುಣಾನಿಧಿಯ ಕೊಂಕು ಮಾತುಗಳಿಗೆ ತಕ್ಕ ಪ್ರತಿಕ್ರಿಯೆ ನೀಡಲು ಆಕೆ ಸಮರ್ಥರಾಗಿದ್ದರು” ಎಂದು ಸೊಲೈ ಹೇಳಿದ್ದರು.

ಆದರೆ ಜಯಲಲಿತಾ ಮತ್ತು ಸೊಲೈ ಅವರ ಗೆಳೆತನ ಕೂಡ ಹೆಚ್ಚು ಕಾಲ ಬಾಳಲಿಲ್ಲ. “ಸೊಲೈ ಅವರು ಎಂಜಿಆರ್ ಅವರಿಗೆ ತುಂಬಾ ಹತ್ತಿರದವಾಗಿದ್ದರಿಂದ ಆವರು ತನಗೆ ಅಷ್ಟೊಂದು ನಿಷ್ಠರಾಗಿರಲಿಲ್ಲವೆಂದು ಜಯಲಲಿತಾ ನಂಬಿದ್ದರು. ಸೊಲೈ ಅವರೇ ಈ ಬಗ್ಗೆ ನನ್ನಲ್ಲಿ ಹೇಳಿಕೊಂಡಿದ್ದರು” ಎಂದು ಹಿರಿಯ ಪತ್ರಕರ್ತ ಜವಾಹರ್ ಹೇಳುತ್ತಾರೆ.

`ತುಘ್ಲಕ್’ ಪತ್ರಕರ್ತ `ಚೋ’ ಎಸ್ ರಾಮಸ್ವಾಮಿ ಕೂಡ ಜಯಲಲಿತಾರೊಂದಿಗೆ ಕೆಲವೊಮ್ಮೆ ಉತ್ತಮ ಬಾಂಧವ್ಯ ಹೊಂದಿದ್ದರೂ ಮತ್ತೆ ಕೆಲವೊಮ್ಮೆ ಅವರಿಬ್ಬರ ನಡುವೆ ಹೊಂದಾಣಿಕೆ ಕಂಡು ಬಂದಿರಲಿಲ್ಲ. ವೈ ಜಿ ಪಾರ್ಥಸಾರಥಿಯವರ ರಂಗಭೂಮಿ ತಂಡ ಯುನೈಟೆಡ್ ಅಮೆಚೂರ್ ಆರ್ಟಿಸ್ಟ್ಸ್ ಇದರಲ್ಲಿ ಅವರು ಕೆಲಸ ಮಾಡುತ್ತಿದ್ದಾಗ ಅವರಿಬ್ಬರಲ್ಲಿ ಗೆಳೆತನ ಮೂಡಿತ್ತು. ಆದರೆ ಡಿಎಂಕೆ ಹಾಗೂ ತಮಿಳ್ ಮಾಣಿಲ ಕಾಂಗ್ರೆಸ್ ನಡುವೆ 1996ರಲ್ಲಿ ಹೊಂದಾಣಿಕೆ ಏರ್ಪಡಿಸಿ ಅದಕ್ಕೆ ನಟ ರಜನೀಕಾಂತ್ ಬೆಂಬಲ ಗಳಿಸಲು ಚೋ ಯತ್ನಿಸಿದಾಗ ಅವರಿಬ್ಬರ ಗೆಳೆತನ ಅಂತ್ಯಗೊಂಡಿತ್ತು.

ಚೋ ತನ್ನನ್ನು ನನ್ನ ಸ್ನೇಹಿತೆ ಎಂದು ಹೇಳುವುದನ್ನು ನಿಲ್ಲಿಸಬೇಕು ಎಂದು ಜಯಲಲಿತಾ ಬಹಿರಂಗವಾಗಿಯೇ ಹೇಳಿಬಿಟ್ಟಿದ್ದರು. ಮುಂದೆ ಅವರಿಬ್ಬರೂ ಜತೆಯಾಗಿ ಶಶಿಕಲಾ ಮತ್ತವರ ಬೆಂಬಲಿಗರನ್ನು ಜಯಲಲಿತಾ ಅವರ ಪೊಯೆಸ್ ಗಾರ್ಡನ್ ನಿವಾಸದಿಂದ ಡಿಸೆಂಬರ್ 2011ರಲ್ಲಿ  ಉಚ್ಛಾಟಿಸುವಲ್ಲಿ ಸಫಲರಾಗಿದ್ದರು.

ನಂತರದ ಬೆಳವಣಿಗೆಗಳಲ್ಲಿ  ಮತದಾನ ಶಾಸ್ತ್ರಜ್ಞ ವಿ ಭಾಸ್ಕರನ್ ಅವರ ನೇತೃತ್ವದ ನಾಲ್ಕು ಸದಸ್ಯರ ತಂಡವೊಂದು  1996 ಚುನಾವಣೆಯಲ್ಲಿ ಅವರ ಪಕ್ಷದ ಸೋಲಿನ ಬಳಿಕ ಅದನ್ನು ಮೇಲೆತ್ತುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.  ಚುನಾವಣೆಯ ಮುಂಚೆಯೇ ಆಕೆಯ ಜತೆ ಕೆಲಸ ಮಾಡುತ್ತಿದ್ದ ಭಾಸ್ಕರನ್ ಆಕೆಯ ಪಕ್ಷ ಸೋಲುಣ್ಣುವುದು ಎಂದು ಭವಿಷ್ಯ ನುಡಿದಿದ್ದರು.

ಅವರ  ಸಲಹೆಯಂತೆಯೇ ಜಯಲಲಿತಾ ತನ್ನ ಆಪ್ತೆ ಶಶಿಕಲಾರನ್ನು ತಮ್ಮ ನಿವಾಸದಿಂದ ಹೊರ ಕಳುಹಿಸಿದ್ದರು. ಎಐಎಡಿಎಂಕೆ 2001ರಲ್ಲಿ ಮತ್ತೆ ಅಧಿಕಾರಕ್ಕೆ ಬಂದಾಗ  ಅವರನ್ನು ಹೆರಾಯಿನ್ ಹೊಂದಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಮದ್ರಾಸ್ ಹೈಕೋರ್ಟ್ ಅವರನ್ನು ದೋಷಮುಕ್ತಗೊಳಿಸಿದರೂ ಡಿಸೆಂಬರ್ 2013ರಲ್ಲಿ ಅವರು ಮೃತಪಟ್ಟಿದ್ದರು.

ಇತ್ತೀಚಿನವರೆಗೂ ಜಯಲಲಿತಾ ಅವರ ಪ್ರಬಲ ಟೀಕಾಕಾರರಾಗಿದ್ದ ದ್ರಾವಿಡ ಕಝಗಮ್ ಪಕ್ಷದ ಕೆ ವೀರಮಣಿ ಹಲವಾರು ವರ್ಷಗಳ ಕಾಲ ಜಯಲಲಿತಾರ ಸಲಹೆಗಾರರಾಗಿದ್ದರು.  ಜಯಲಲಿತಾ ಸರಕಾರ ಶೈಕ್ಷಣಿಕ ಸಂಸ್ಥೆಗಳಲ್ಲಿ ಶೇ 69 ಮೀಸಲಾತಿ ಒದಗಿಸುವ ಮಸೂದೆ ಜಾರಿಗೊಳಿಸಿದ ಬಳಿಕ ಅವರಿಗೆ ಸಮೂಗ ನೀತಿ ಕಾಥ ವೀರಾಂಗನೈ  (ಸಾಮಾಜಿಕ ನ್ಯಾಯ ಎತ್ತಿ ಹಿಡಿದ ನಾಯಕಿ) ಎಂಬ ಬಿರುದನ್ನು ವೀರಮಣಿ ನೀಡಿದ್ದರು.

ಜಯಲಲಿತಾ 1998ರಲ್ಲಿ ಬಿಜೆಪಿ ಜತೆ ಮೈತ್ರಿ ನಡೆಸಿದಾಗಲೂ ವೀರಮಣಿ ಅವರ ಜತೆ ಸ್ನೇಹವನ್ನು ಉಳಿಸಿಕೊಂಡಿದ್ದರು. ನಂತರ ಅವರು ಡಿಎಂಕೆ ಬೆಂಬಲಿಗರಾಗಿ ಬಿಟ್ಟಿದ್ದರು.