ನಮ್ಮ ಕರಾವಳಿ ಪ್ರೀತಿಸುತ್ತಿದ್ದ ಜಯಾ

ಮಂಗಳೂರು : ತಮಿಳುನಾಡಿನ ಜನತೆಯ ಪ್ರೀತಿಯ ಅಮ್ಮನಾಗಿ ಇದೀಗ ಮಣ್ಣಾಗಿ ಹೋಗಿರುವ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ, ತನ್ನ ಎಳವೆಯಲ್ಲೇ ಕಲಾರಂಗದತ್ತ ಆಸಕ್ತಿ ವಹಿಸಿಕೊಂಡವರು. ಕರಾವಳಿಯ ಜೊತೆಗೆ ನೇರ ಸಂಪರ್ಕ ಇಟ್ಟುಕೊಂಡಿದ್ದರು.

ಬಾಲನಟಿಯಾಗಿ ನಟಿಸಿದ್ದ ಜಯಾ, ಕರಾವಳಿಯ ಮತ್ತು ತುಳು ರಂಗಭೂಮಿಯ ಖ್ಯಾತ ನಿರ್ದೇಶಕ ಆರೂರು ಪಟ್ಟಾಭಿಯವರ ಮೂಲಕ ಕನ್ನಡ ಚಿತ್ರ ರಂಗವನ್ನು ಪ್ರವೇಶಿಸಿದ್ದರು ಎಂದು ಪಟ್ಟಾಭಿ ಕುಟುಂಬದ ಸದಸ್ಯರೊಬ್ಬರು ನೆನಪಿಸಿದ್ದಾರೆ.

ತುಳು ಚಿತ್ರ ಬೀಸತ್ತಿ ಬಾಬು, ಕರಿಯಣಿ ಕಟ್ಟಂದಿ ಕಂಡಣಿ ಮೊದಲಾದ ಚಿತ್ರಗಳನ್ನು ಆರೂರು ನಿರ್ದೇಶನ ನೀಡಿದ್ದರು. ಈ ವೇಳೆ ಆರೂರು ಅವರು ಜಯಾರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಕೊಲ್ಲೂರು ಮೂಕಾಂಬಿಕೆಯ ಭಕ್ತರಾಗಿದ್ದ ಜಯಲಲಿತ ಅವರು ಹಲವು ಬಾರಿ ಕೊಲ್ಲೂರಿಗೆ ಬಂದು ಹೋಗುತ್ತಿದ್ದರು. ಕನ್ನಡಿಗರ ಬಗ್ಗೆ ಜಯಾ ಅಪಾರ ಪ್ರೀತಿ ಹೊಂದಿದ್ದರು ಎಂದು ಅವರು ಸ್ಮರಿಸಿಕೊಂಡಿದ್ದಾರೆ.