ಕೋರ್ಟಿಗೆ ಹಾಜರಾಗದ ಜಯ್ ಶಾ ; ವಿಚಾರಣೆ ಮುಂದೂಡಿಕೆ

 ಅಹ್ಮದಾಬಾದ್ : ಮೋದಿ ಸರಕಾರದ ಅವಧಿಯಲ್ಲಿ ತನ್ನ  ಒಡೆತನದ ಕಂಪೆನಿಯ ಆದಾಯ 16,000 ಪಟ್ಟು ಅಧಿಕಗೊಂಡಿತ್ತು ಎಂದು `ದಿ ವೈರ್’ ಸುದ್ದಿ ತಾಣ ವರದಿ ಪ್ರಕಟಿಸಿದ್ದಕ್ಕಾಗಿ ಅದರ ವಿರುದ್ಧ ನೂರು ಕೋಟಿ ರೂಪಾಯಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪುತ್ರ ಜಯ್ ಶಾ ಸೋಮವಾರ ಅಹ್ಮದಾಬಾದ್ ಮೆಟ್ರೋಪಾಲಿಟನ್ ನ್ಯಾಯಾಲಯದಲ್ಲಿ ಆರಂಭಗೊಳ್ಳಬೇಕಿದ್ದ ವಿಚಾರಣೆಗೆ ಹಾಜರಾಗದೇ ಇದ್ದುದರಿಂದ ವಿಚಾರಣೆಯನ್ನು ಡಿಸೆಂಬರ್ 16ಕ್ಕೆ ಮುಂದೂಡಲಾಗಿದೆ.