ಗಾಲಿ ಜನಾರ್ದನ ರೆಡ್ಡಿ ಕಟೀಲಿಗೆ ಗುಪ್ತ ಭೇಟಿ

ಕಟೀಲು ಕ್ಷೇತ್ರಕ್ಕೆ ರಾಜ್ಯ ಮಾಜೀ ಸಚಿವ ಬಳ್ಳಾರಿಯ ಗಾಲಿ ಜನಾರ್ಧನ ರೆಡ್ಡಿ ಭೇಟಿ ನೀಡಿದರು

ಮೂಲ್ಕಿ : ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಗುಪ್ತವಾಗಿ ಬೇಟಿ ನೀಡಿ, ದುರ್ಗೆಗೆ ಚಂಡಿಕಾ ಯಾಗ ಸೇವೆಯನ್ನು ಸಲ್ಲಿಸಿದ್ದಾರೆ. ರೆಡ್ಡಿ ಜೊತೆ ಅವರ ಪತ್ನಿ ಲಕ್ಷ್ಮೀ ಇದ್ದರು.
ಚಂಡಿಕಾ ಹೋಮದ ನಂತರ ದೇವಸ್ಥಾನದಲ್ಲಿ ಉಪಹಾರ ಸೇವಿಸಿದರು. ಈ ಹಿಂದೆಯೇ ಕಟೀಲು ದೇವಸ್ಥಾನಕ್ಕೆ ಬಂದು ಚಂಡಿಕಾ ಹೋಮ ಸೇವೆ ಕೊಡಬೇಕಾಗಿದ್ದು ಕಾರಣಾಂತರದಿಂದ ಸಾದ್ಯವಾಗಿಲ್ಲ ಎಂದರು.
ಮಾದ್ಯಮದೊಂದಿಗೆ ಯಾವುದೇ ರಾಜಕೀಯದ ಸ್ಥಿತಿ ಗತ್ಯಂತರಗಳ ಬಗ್ಗೆ ಹೇಳಿಕೆಯನ್ನು ಕೊಡಲು ನಿರಾಕರಿಸಿದರು.
ಕಟೀಲು ಹೋಟೇಲಿನ ವಸತಿಗೃಹದಲ್ಲಿ ವಾಸ್ಯವ್ಯ ಹೂಡಿದ ರೆಡ್ಡಿ, ಸೋಮವಾರ ರಾತ್ರಿ ಸುಮಾರು 7 ಗಂಟೆಗೆ ಕಟೀಲಿಗೆ ಬೇಟಿ ನೀಡಿದ್ದು, ಸ್ಥಳೀಯ ವಸತಿ ಗೃಹ ಸೌಂದರ್ಯ ಪ್ಯಾಲೇಸಿನಲ್ಲಿ ವಾಸ್ತವ್ಯ ಹೋಡಿದ್ದರು. ಆದರೆ ಯಾರಿಗೂ ಮಾಹಿತಿ ನೀಡಲಿಲ್ಲ.
ಕಟೀಲು ದೇವಸ್ಥಾನದಲ್ಲಿ ಚಂಡಿಕಾ ಹೋಮ ಸೇವಾ ಕರ್ತರಲ್ಲಿ ಸೂರ್ಯನಾರಾಯಣ ಶರ್ಮ ಬಳ್ಳಾರಿ ಎಂಬ ಹೆಸರಿನಿಂದ ನೋಂದಣಿಯಾಗಿದ್ದು ದೇವಸ್ಥಾನದ ಆಡಳಿತ ಮಂಡಳಿಗೂ ಜನಾರ್ಧನ ರೆಡ್ಡಿ ಬರುವ ಬಗ್ಗೆ ಮಾಹಿತಿ ಇರಲಿಲ್ಲ. ಮಂಗಳವಾರ ಬೆಳಗ್ಗೆ ಸುಮಾರು 5 ಗಂಟೆಗೆ ಕಟೀಲು ದೇವಸ್ಥಾನಕ್ಕೆ ಬರುವಾಗಲೇ ತಿಳಿಯಿತು ಎನ್ನಲಾಗಿದೆ. ದೇವಸ್ಥಾನದಿಂದ ವಸತಿ ಗೃಹಕ್ಕೆ ಸುಮಾರು 100 ಮೀಟರ್ ಅಂತರವಿದ್ದು ರೆಡ್ಡಿ ದಂಪತಿಗಳು ಸಾಮಾನ್ಯ ಭಕ್ತರಂತೆ ನಡೆದುಕೊಂಡೆ ಬಂದಿದ್ದರು. ಈ ನಡುವೆ ದೇವಳದಲ್ಲಿ ಸಿಂಪಲ್ಲಾಗಿಯೇ ನಯವಿನಯದಿಂದ ನಡೆದುಕೊಂಡು ಮಾದ್ಯಮದವರೊಡನೆ ಮಾತನಾಡಿ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದರು.