ಜನನುಡಿಗೆ ಸರಿಸಾಟಿ ಮತ್ತೊಂದಿಲ್ಲ

ಹಲವು ವರ್ಷಗಳ ಹಿಂದೆ ಮೂಡಬಿದ್ರೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದಿತ್ತು  ಅದು ಸರಿಯಾಗಿ ನಡೆದಿಲ್ಲ ಎಂಬ ಭಾವನೆಯಲ್ಲಿ ಪರ್ಯಾಯ ಸಾಹಿತ್ಯ ಸಮ್ಮೇಳನವನ್ನು ಪ್ರತಿವರ್ಷ ನಡೆಸಿಕೊಂಡು ಬರಲಾಗಿದೆ  ಈಗ ಸಾಹಿತ್ಯ ಸಮ್ಮೇಳನ ಸರಿಯಾಗಿದೆಯೇ ಎಂದು ಕೇಳಿದರೆ  ಉತ್ತರಿಸಲು ತಡಕಾಡಬೇಕಾದೀತು  ಏಕೆಂದರೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳು ಒಂದು ಬಗೆಯ ಜಾತ್ರೆಯಂತೆ ನಡೆಯುತ್ತವೆ  ಇಲ್ಲಿ ಅವ್ಯವಸ್ಥೆ  ಗೊಂದಲಗಳು ಹೆಚ್ಚು  ನುಡಿಸಿರಿಯಲ್ಲಿ ಅವ್ಯವಸ್ಥೆ  ಗೊಂದಲಗಳು ಕಡಿಮೆ  ಆದರೆ ಇದು ಜಾತ್ರೆ ಅಲ್ಲವೆಂದು ಹೇಳಲಿಕ್ಕಾಗದು
ನುಡಿಸಿರಿಗೆ ಬಂದವರಲ್ಲಿ ಶೇಕಡ 10ಕ್ಕಿಂತ ಕಡಿಮೆ ಜನರು ಗೋಷ್ಠಿ  ಭಾಷಣಗಳಲ್ಲಿ ಹಾಜರಿರುತ್ತಿದ್ದರೆ  ಉಳಿದ 90 ಶೇಕಡ ಮಂದಿ ನುಡಿಸಿರಿಯ ಜಾತ್ರೆಯಲ್ಲಿ ಭಾಗವಹಿಸುತ್ತಾರೆ  ವಸ್ತು ಪ್ರದರ್ಶನ  ಅಂಗಡಿಗಳು  ಅಲಂಕಾರಗಳು  ಇರುವ ರಸ್ತೆಗಳಲ್ಲಿ ಅಲ್ಲಲ್ಲಿ ವಾದ್ಯವಾದನ ಡೊಂಬರಾಟ  ಮ್ಯಾಜಿಕ್ ಶೋ ಇತ್ಯಾದಿಗಳೆಲ್ಲಾ ಇರುವಾಗ  ಜೊತೆಗೆ 10-12 ವೇದಿಕೆಗಳಲ್ಲಿ ಮನರಂಜನೆಗಳೂ ಇರುವಾಗ ಈ ಜಾತ್ರೆಯನ್ನು ಅನಂದಿಸಲೆಂದೇ ಬೇರೆ ಬೇರೆ ಊರುಗಳಿಂದ ಸಾವಿರಾರು ಜನ ಬರುತ್ತಾರೆ  ವರ್ಷಾಂತ್ಯದ ವಿಹಾರಕ್ಕಾಗಿ ಅಥವಾ ಪ್ರವಾಸಿ ಕೇಂದ್ರಗಳಿಗೊಂದು ಪರ್ಯಾಯವಾಗಿ ನುಡಿಸಿರಿ ಜಾತ್ರೆ ಜನರಿಗೆ ಒದಗಿ ಬರುತ್ತದೆ
ಮೂರು ವರ್ಷಗಳ ಹಿಂದೆ ಆರಂಭವಾದ ಜನನುಡಿ ಎಂಬ ಇನ್ನೊಂದು ಸಾಹಿತ್ಯ ಸಮ್ಮೇಳನ ಇವುಗಳಿಗಿಂತ ವಿಭಿನ್ನ  ನುಡಿಸಿರಿ ಅಂದರೆ ನುಡಿಯ ಹೆಸರಲ್ಲಿ ಸಿರಿಯ ಪ್ರದರ್ಶನದಂತೆ ಕಂಡರೆ ಜನನುಡಿಯು ನಿಜಕ್ಕೂ ಜನರ ನುಡಿಯಾಗಿ ನಡೆದುಕೊಂಡು ಬರುತ್ತಿದೆ
ಸಮಯದ ಒತ್ತಡವಿಲ್ಲದ ಗಂಭೀರ ವಿಷಯಗಳ ಗೋಷ್ಠಿಗಳು  ವಿಚಾರಪೂರ್ಣ ಭಾಷಣಗಳು  ಸಭೆಯಲ್ಲಿರುವ ಪ್ರತಿಯೊಬ್ಬರ ಗಮನವನ್ನೂ ಸೆಳೆದಿಡುತ್ತದೆ  ಪ್ರಶ್ನೋತ್ತರಗಳು ಪ್ರಬುದ್ಧ ನೆಲೆಯಲ್ಲಿ ನಡೆಯುತ್ತವೆ  ಬಿಡುವಿನ ಅವಧಿಯಲ್ಲಿ ಚರ್ಚೆಗಳು ಅನೌಪಚಾರಿಕ ನೆಲೆಯಲ್ಲಿ ಬೇರೆ ಬೇರೆ ಗುಂಪುಗಳಲ್ಲಿ ಮುಂದುವರಿಯುತ್ತವೆ  ಜನನುಡಿಗೆ ಬಂದ ಅಷ್ಟೂ ಜನ ಎರಡೂ ದಿನಗಳ ಕಲಾಪಗಳಲ್ಲಿ  ಗಂಭೀರವಾಗಿ ಪಾಲ್ಗೊಳ್ಳುವ ಅದ್ಭುತ ವಿದ್ಯಮಾನ ನಡೆಯಿತು
ಜನನುಡಿಯ ವಿಶೇಷವೇನೆಂದರೆ  ಇದನ್ನು ಸಂಘಟಿಸುವ ಸಮಿತಿ ಪ್ರಮುಖರು  ವೇದಿಕೆಯಲ್ಲಿ ಕಾಣಿಸಿಕೊಳ್ಳುವುದೇ ವಿರಳ  ಮುಂಡಾಸುಗಳು ಇಲ್ಲವೇ ಇಲ್ಲ  ಹೊಗಳಿಕೆಯ ಮಾತುಗಳಂತೂ ದೂರ  ತಮ್ಮ ಕಿಸೆಯಿಂದ ಖರ್ಚು ಮಾಡಿ ಬರುವುದಲ್ಲದೆ  ಜನನುಡಿಯ ವೆಚ್ಚಕ್ಕೆ ದೇಣಿಗೆಯನ್ನು ನೀಡಿ  ಬಂದವರೇ ನಡೆಸುತ್ತಾರೆನ್ನುವಂತೆ ನಡೆಯುವ ಜನನುಡಿಗೆ ಸರಿ ಸಾಟಿ ಇನ್ನೊಂದಿಲ್ಲ

  • ಮಹೇಶ್  ಕಂಕನಾಡಿ ಮಂಗಳೂರು