ನೆಬಿ ದಿನ ಮೆರವಣಿಗೆ ಮಧ್ಯೆ ಸಮಿತಿ ಅಧ್ಯಕ್ಷ ಕುಸಿದು ಮೃತ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ನೆಬಿದಿನ ಮೆರವಣಿಗೆ ಮಧ್ಯೆ ಕೀಯೂರು ಜಮಾಹತ್ ಮೀಲಾದ ಸಮಿತಿ ಅಧ್ಯಕ್ಷ ಹಾಗೂ ಯು ಎ ಇ ಸಮಿತಿ ಅಧ್ಯಕ್ಷನೂ ಆಗಿರುವ ಮುತ್ತಲಿಬ್ ಅಬ್ದುಲ್ ರಹ್ಮಾನ್ ಹಾಜಿ (55)  ಕುಸಿದುಬಿದ್ದು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಸೋಮವಾರ ಬೆಳಿಗ್ಗೆ ನೆಬಿ ದಿನ ಮೆರವಣಿಗೆಗೆ ಮುಂಚಿತವಾಗಿ ಮದ್ರಸದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುತ್ತಲಿಬ್ ಅಬ್ದುಲ್ ರಹ್ಮಾನ್ ಹಾಜಿ ಬಳಿಕ ಮೆರವಣಿಗೆಗೆ ನೇತೃತ್ವ ನೀಡುತ್ತಾ ಮುಂದಕ್ಕೆ ಸಾಗಿದ್ದರು. ಮೆರವಣಿಗೆ 200 ಮೀಟರ್ ಮುಂದಕ್ಕೆ ಸಾಗುತಿದ್ದಂತೆಯೇ ಕುಸಿದು ಬಿದ್ದರು.

ಕೂಡಲೇ ಸಹದಿಯ್ಯ ಆಸ್ಪತ್ರೆಯಲ್ಲಿ ದಾಖಲಿಸಿದರೂ ಜೀವವನ್ನು ಉಳಿಸಲು ಸಾಧ್ಯವಾಗಿಲ್ಲ. ನೆಬಿದಿನ ಮೆರವಣಿಗೆಯಲ್ಲಿ ಸಂಭವಿಸಿದ ಅಕಾಲಿಕ ಮರಣವು ಊರವರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.