ಜೇಟ್ಲಿ- ಜೇಠ್ಮಲಾನಿ ವ್ಯಾಗ್ಯುದ್ಧ

  ನವದೆಹಲಿ :  ದೆಹಲಿ ಹೈಕೋರ್ಟಿನಲ್ಲಿ ಬುಧವಾರ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ವಿರುದ್ಧದ ಮಾನಹಾನಿ ಪ್ರಕರಣದ ವಿಚಾರಣೆ  ಸಂದರ್ಭ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲ ಅವರನ್ನು ಪಾಟೀ ಸವಾಲಿಗೆ ಒಳಪಡಿಸುತ್ತಿದ್ದಾಗ ಅವರ ಹಾಗೂ ಹಿರಿಯ ವಕೀಲ ರಾಮ ಜೇಠ್ಮಲಾನಿ  ನಡುವೆ ದೊಡ್ಡ ವ್ಯಾಗ್ಯುದ್ಧವೇ ನಡೆಯಿತು.

ಕೇಜ್ರಿವಾಲ್ ಪರ ವಾದಿಸುತ್ತಿರುವ ಜೇಠ್ಮಲಾನಿ ಒಂದು ಸಂದರ್ಭದಲ್ಲಿ ತಮ್ಮ ವಿರುದ್ಧ ತಪ್ಪಾದ ಪದವೊಂದನ್ನು  ಉಪಯೋಗಿಸಿದ್ದು ಜೇಟ್ಲಿಗೆ ಸರಿ ಕಾಣದೇ ಇದ್ದುದರಿಂದ  ರೂ 10 ಕೋಟಿ ಪರಿಹಾರ ಯಾಚಿಸಿ  ಅವರು ದಾಖಲಿಸಿರುವ ಈ ಮಾನಹಾನಿ ಪ್ರಕರಣದಲ್ಲಿ ಅವರ ಹೇಳಿಕೆಯನ್ನು ದಾಖಲಿಸುವುದು ಅಸಾಧ್ಯವಾಯಿತು.

ಜಂಟಿ ರಿಜಿಸ್ಟ್ರಾರ್ ದೀಪಾಲಿ ಶರ್ಮ ಎದುರು ಹಾಜರಾಗಿದ್ದ ವಿತ್ತ ಸಚಿವರು ತಾಳ್ಮೆ ಕಳೆದುಕೊಂಡು ಜೇಠ್ಮಲಾನಿ ಅವರು  ಕೇಜ್ರಿವಾಲ್ ಆವರ ಆದೇಶದ ಮೇರೆಗೆ ಆ ಪದ ಉಪಯೋಗಿಸಿದ್ದಾರೆಯೇ ಎಂದು ಪ್ರಶ್ನಿಸಿದರು.