ಜಗ್ಗೇಶನಿಗೆ ಒಂದೇ ರೀತಿಯ ಪಾತ್ರದಲ್ಲಿ ಅಭಿನಯಿಸಿ ಸಾಕಾಗಿದೆಯಂತೆ

ನÀವರಸ ನಾಯಕ ಎನ್ನುವ ಬಿರುದಾಂಕಿತ ಜಗ್ಗೇಶನಿಗೆ ಬರೀ ಕಾಮಿಡಿ ಪಾತ್ರದಲ್ಲಿ ನಟಿಸಿ ಬೋರಾಗಿದೆಯಂತೆ. ಅದಕ್ಕಾಗಿ ಈಗ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಹರಿಕೃಷ್ಣ ನಿರ್ದೇಶನದ `8 ಎಂಎಂ’ ಎನ್ನುವ ಸಿನಿಮಾದಲ್ಲಿ ಜಗ್ಗೇಶ್ ನಟಿಸುತ್ತಿದ್ದು ಅದರ ಮೊದಲ ಪೆÇೀಸ್ಟರ್ ಅನ್ನು ಸ್ವತಃ ಜಗ್ಗೇಶ್ ತನ್ನ ಟ್ವಿಟ್ಟರಿನಲ್ಲಿ ಹಾಕಿಕೊಂಡಿದ್ದಾರೆ. ಚಿತ್ರದಲ್ಲಿ ಜಗ್ಗೇಶ್ ಸೀರಿಯಲ್ ಕಿಲ್ಲರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಾಮಾನ್ಯ ವ್ಯಕ್ತಿಯೊಬ್ಬ ತನ್ನ ಕುಟುಂಬ ಹಾಗೂ ಸ್ನೇಹಿತರ ಕಾರಣದಿಂದಾಗಿ ತಪ್ಪು ದಾರಿ ಹಿಡಿಯುತ್ತಾನೆ, ಹಣಕ್ಕಾಗಿ ಸರಣಿ ಕೊಲೆಗಾರನಾಗುತ್ತಾನೆ. ಅಂದ ಹಾಗೆ ಈ ಪಾತ್ರ ಮಾಡಲು ಜಗ್ಗೇಶನಿಗೆ ಸೂಪರ್ ಸ್ಟಾರ್ ರಜನಿಕಾಂತ್ ಸ್ಫೂರ್ತಿಯಂತೆ. ತನ್ನ ಇಮೇಜ್ ಬದಲಿಸಿಕೊಳ್ಳಲು ಜಗ್ಗೇಶ್ 8 ಸಿನಿಮಾಗಳ ಆಫರ್ ನಿರಾಕರಿಸಿದ್ದಾರಂತೆ. ಅಂತೂ ತಾನು ಬಯಸಿದಂತಹ ಪಾತ್ರ ಸಿಗುತ್ತಿರುವುದಕ್ಕೆ ಜಗ್ಗೇಶ್ ಭಾರೀ ಎಕ್ಸೈಟಿನಿಂದಿದ್ದಾರೆ. ಸಿನಿಮಾ ಸೆಪ್ಟಂಬರ್ 22 ರಂದು ಸೆಟ್ಟೇರಲಿದೆ.