ಕೈರಳಿ ಪ್ರಕಾಶನದಿಂದ ಜಗದೀಶ್ಚಂದ್ರಗೆ ಸನ್ಮಾನ

ಎಸ್ ಜಗದೀಶ್ಚಂದ್ರ ಅಂಚನ್

ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕ್ರೀಡಾಅಂಕಣಕಾರ ಎಸ್ ಜಗದೀಶ್ಚಂದ್ರ ಅಂಚನ್ ಅವರನ್ನು ಗುರುವಾರ ಕೈರಳಿ ಪ್ರಕಾಶನದ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಕರ್ನಾಟಕ ರಾಜ್ಯ ವಿಧಾನಪರಿಷತ್ ಸಭಾಪತಿಗಳಾದ ಡಿ ಎಚ್ ಶಂಕರ ಮೂರ್ತಿ ಅವರು ಜಗದೀಶ್ಚಂದ್ರರಿಗೆ ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಿದರು.
ಸಮಾರಂಭದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ ಸುರೇಶ್ ಬಲ್ಲಾಳ್, ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಬೆಳಪು ಮೊದಲಾದವರು ಉಪಸ್ಥಿತರಿದ್ದರು.