ಮರಣದಂಡನೆ ವಿರುದ್ಧ ಜಾಧವ್ ಮನವಿ ಸಲ್ಲಿಸಬಹುದು : ಬಸಿತ್

ನವದೆಹಲಿ : ಭಾರತೀಯ ನೌಕಾ ದಳದ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ತನಗೆ ಪಾಕಿಸ್ತಾನ ನ್ಯಾಯಾಲಯ ಜಾರಿಗೊಳಿಸಿರುವ ಮರಣ ದಂಡನೆ ವಿರುದ್ಧ ಪಾಕಿಸ್ತಾನದ ಅಧ್ಯಕ್ಷರಿಗೆ ಮನವಿ ಸಲ್ಲಿಸಬಹುದಾಗಿದೆ ಎಂದು ಇಸ್ಲಾಮಾಬಾದ್ ನಿನ್ನೆ ಹೇಳಿದೆ. ಜಾಧವ್ ಭಾರತದ ಆಂತರಿಕ ಗುಪ್ತಚರ ಏಜೆನ್ಸಿ `ರಾ’ಕ್ಕಾಗಿ (ರೀಸರ್ಚ್ ಆ್ಯಂಡ್ ಎನಾಲಿಸಿಸ್ ವಿಂಗ್) ಕೆಲಸ ಮಾಡಿರುವ ಬಗ್ಗೆ ಪಾಕಿಸ್ತಾನ ಸರ್ಕಾರದಲ್ಲಿ ಸಾಕಷ್ಟು ಪುರಾವೆಗಳಿವೆ ಎಂದು ದಿಲ್ಲಿಯಲ್ಲಿರುವ ಇಸ್ಲಾಮಾಬಾದಿನ ರಾಯಭಾರಿ ಅಬ್ದುಲ್ ಬಸಿತ್ ಟೀವಿ ಸಂದರ್ಶನವೊಂದರಲ್ಲಿಲ ಹೇಳಿದ್ದಾರೆ.