ಸಂಗಾತಿಗಾಗಿ ಜಾಕ್ವೆಲಿನ್, ರಣವೀರನಿಗೆ ಪೂಜೆ !

ತಮಗೆ ಒಬ್ಬರು ಸಂಗಾತಿ ಸಿಗಲಿ ಎನ್ನುವುದು ಎಲ್ಲಾ ಹದಿಹರೆಯದವರ ಬಯಕೆ. ಅದಕ್ಕಾಗಿ ಏನೆಲ್ಲಾ ಕಸರತ್ತು ಮಾಡಲೂ ಅವರು ತಯಾರಿರುತ್ತಾರೆ. ದೆಹಲಿಯ ಹಿಂದೂ ಕಾಲೇಜಿನಲ್ಲಿ ಸಂಗಾತಿಗಾಗಿ ಈ ವರ್ಷ ಜಾಕ್ವೆಲಿನ್ ಫೆರ್ನಾಂಡಿಸ್ ಹಾಗೂ ರಣವೀರ್ ಸಿಂಗ್‍ಗೆ ಪೂಜೆ ಮಾಡಿದ್ದಾರೆ ಅಲ್ಲಿಯ ಸ್ಟೂಡೆಂಟ್ಸ್.

ದೆಹಲಿ ಯೂನಿವರ್ಸಿಟಿಯ ಹಿಂದೂ ಕಾಲೇಜಿನಲ್ಲಿ ಪ್ರತೀ ವರ್ಷ ವ್ಯಾಲೆಂಟೈನ್ಸ್ ಡೇಯನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಅಲ್ಲೊಂದು ಮರವಿದೆ. ಆ ಮರವನ್ನು ಬಣ್ಣ ಬಣ್ಣದ ಹೃದಯಾಕಾರದ ಬಲೂನಿನಿಂದ ಸಿಂಗರಿಸಿ ಅದಕ್ಕೆ ಆ ವರ್ಷ ಹೆಚ್ಚು ಚಲಾವಣೆಯಲ್ಲಿರುವ ನಟಿಯ ದೊಡ್ಡ ಪೋಸ್ಟರನ್ನು ಕಟ್ಟಿ ಅದಕ್ಕೆ ಪೂಜೆ ಮಾಡಲಾಗುವುದು. ಆ ನಟಿಯನ್ನು ಅವರು `ದಮ್ದಾಯಿ ಮಾಯಿ’ ಎಂದು ಜಯ ಘೋಷದೊಂದಿಗೆ ಪೂಜಿಸುತ್ತಾರೆ. ಹಾಗೆ ಮಾಡಿದರೆ ಅವರಿಗೆ ಆರೇ ತಿಂಗಳಲ್ಲಿ ಸಂಗಾತಿ ಸಿಗುವುದು ಮಾತ್ರವಲ್ಲದೇ ಅವರು ಒಂದು ವರ್ಷದಲ್ಲಿ ತಮ್ಮ ವರ್ಜಿನಿಟಿಯನ್ನೂ ಕಳೆದುಕೊಳ್ಳುತ್ತಾರೆ. ಅಂದರೆ ಒಂದು ವರ್ಷದೊಳಗೆ ಅವರು ಸೆಕ್ಸ್ ಸುಖ ಕೂಡಾ ಪಡೆಯುತ್ತಾರೆ ಎನ್ನುವ ನಂಬಿಕೆ ಅಲ್ಲಿಯವರದ್ದು. ಈ ಬಾರಿ ಜಾಕ್ಲಿನ್‍ಳನ್ನು ಅವರು ಪ್ರೇಮದೇವತೆಯಾಗಿ ಆರಿಸಿ ಆಕೆಗೆ ಪೂಜೆ ಮಾಡಿದ್ದಾರೆ. ಈ ವರ್ಷ ಮತ್ತೂ ಒಂದು ವಿಶೇಷವೆಂದರೆ ಅಲ್ಲಿಯ ಹುಡುಗಿಯರೂ ತಮಗೂ ಲವ್ ಸಿಗಲಿ ಎಂದು ಅವರು ರಣವೀರನನ್ನು ಲವ್ ಗುರುವಾಗಿ ಆರಿಸಿಕೊಂಡು ಆತನಿಗೂ ಪೂಜೆ ಸಲ್ಲಿಸಿದ್ದಾರೆ.

ಕಳೆದ ವರ್ಷ ದಿಶಾ ಪಟಾನಿ `ದಮ್ದಾಯಿ ಮಾಯಿ’ ಆಗಿದ್ದಳು. ಅದಕ್ಕೂ ಮೊದಲು ಲೀಸಾ ಹೇಡನ್, ದೀಪಿಕಾ ಪಡುಕೋಣೆ ಕತ್ರೀನಾ ಕೈಫ್ … ಹೀಗೆ ಒಂದೊಂದು ವರ್ಷ ಒಬ್ಬೊಬ್ಬರು ಅವರ ಆರಾಧ್ಯ ದೈವವಾಗಿದ್ದರು. ಅಂದ ಹಾಗೆ ಹೀಗೆ ಪೂಜೆ ಮಾಡುವುದರಿಂದ ಎಷ್ಟು ಜನರಿಗೆ ಪ್ರೇಮಿಗಳು ಸಿಕ್ಕಿದ್ದಾರೋ ಎನ್ನುವ ಲೆಕ್ಕ ಮಾತ್ರ ಅವರು ಬಹಿರಂಗಗೊಳಿಸಿಲ್ಲ.

 

LEAVE A REPLY