ಶಾ ನಿರ್ದೇಶಕನಾಗಿರುವ ಅಹಮದಾಬಾದ್ ಸಹಕಾರಿ ಬ್ಯಾಂಕಿನ ಮೇಲೆ ಐಟಿ ದಾಳಿ

ಅಹಮದಾಬಾದ್ : ನೋಟು ರದ್ದತಿ ಆದೇಶ ಹೊರಬಿದ್ದ ಮೂರೇ ದಿನಗಳಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಿರ್ದೇಶಕರಾಗಿರುವ ಅಹಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕಿನಲ್ಲಿ ರೂ 500 ಕೋಟಿ ಠೇವಣಿಯಿರಿಸಲಾದ ಘಟನೆ ಸಂಬಂಧ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದು, ಡಿಸೆಂಬರ್ 19ರಂದು ಎರಡೂ ಇಲಾಖೆಯ ಅಧಿಕಾರಿಗಳು ಬ್ಯಾಂಕಿನ ಕಚೇರಿ ಮೇಲೆ ದಾಳಿ ನಡೆಸಿ ಸುಮಾರು ಆರು ಗಂಟೆಗಳ ಕಾಲ ಕಡತಗಳನ್ನು ಜಾಲಾಡಿದ್ದಾರೆ.

ಈ ಭಾರೀ ಮೊತ್ತವನ್ನು ಬ್ಯಾಂಕಿನಲ್ಲಿ ನವೆಂಬರ್ 8 ಹಾಗೂ 12ರ ನಡುವೆ ಠೇವಣಿಯಿಡಲಾಗಿದೆ ಎಂದು ಶಂಕಿಸಲಾಗಿದೆ.