3 ಬಂಗಾರದ ಅಂಗಡಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಸಿದ್ದಾಪುರ : ಪಟ್ಟಣದ 3 ಬಂಗಾರದ ಅಂಗಡಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿರುವ ಬಗ್ಗೆ ತಿಳಿದುಬಂದಿದೆ.

ಬುಧವಾರ ಮಧ್ಯಾಹ್ನ 12ರ ಸುಮಾರಿಗೆ ಪಟ್ಟಣದ 3 ಬಂಗಾರದ ಅಂಗಡಿಗಳ ಮೇಲೆ ಏಕಕಾಲದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ತಡರಾತ್ರಿಯವರೆಗೂ ಅಂಗಡಿಗಳ ಬಾಗಿಲು ಮುಚ್ಚಿ ತನಿಖೆ ನಡೆಸುತ್ತಿರುವ ಕುರಿತು ಅಧಿಕೃತವಾಗಿ ಮಾಹಿತಿ ಲಭ್ಯವಾಗಿದೆ. ಈ ಮೊದಲೇ ಈ ಅಂಗಡಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸುವ ನಿರೀಕ್ಷೆ ಜನಸಾಮಾನ್ಯರಲ್ಲಿದ್ದು, ಈಗ ಆ ನಿರೀಕ್ಷೆ ಸತ್ಯವಾಗಿದೆ.