ರಿಯಲ್ ಎಸ್ಟೇಟ್ ಗ್ರೂಪ್, ಮಾಲ್ ಮಾಲಕನಿಂದ 169 ಕೋ ರೂ ಜಪ್ತಿ

ಬೆಂಗಳೂರು : ಇಲ್ಲಿನ ಎರಡು ರಿಯಲ್ ಎಸ್ಟೇಟ್ ಡೆವಲಪರ್ಸ್ ಗ್ರೂಪ್ ಮತ್ತು ಮಾಲ್ ಮಾಲಕನಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 169 ಕೋಟಿ ರೂ ಅಘೋಷಿತ ಮೊತ್ತ ಪತ್ತೆ ಹಚ್ಚಿದ್ದಾರೆ.

ಡಿಸೆಂಬರ್ 23ರಿಂದ ಎರಡು ಗ್ರೂಪುಗಳಲ್ಲಿ ಶೋಧ ಕಾರ್ಯ ಆರಂಭಿಸಿದ್ದ ತೆರಿಗೆ ಅಧಿಕಾರಿಗಳು ಇಷ್ಟೊಂದು ಪ್ರಮಾಣದ ಅಘೋಷಿತ ಮೊತ್ತ ಜಪ್ತಿಯೊಂದಿಗೆ ನಿನ್ನೆ ಕಾರ್ಯಾಚರಣೆ ಕೊನೆಗೊಳಿಸಿದರು.

“ಪ್ರಥಮ ಪ್ರಕರಣದಲ್ಲಿ, ತೆರಿಗೆಯ ಆದಾಯ ಕಡಿಮೆಗೊಳಿಸಿ ಈ ಗ್ರೂಪ್ ಸವಲತ್ತು ಒದಗಿಸಿರುವುದು ಮತ್ತು ಆಸ್ತಿ ಪಡೆದುಕೊಂಡವರಿಂದ ಹಣ ಪಡೆಯಲಾದ ರಿಶೀದಿ ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ 143 ಕೋಟಿ ರೂ ಬಯಲಾಗಿದೆ” ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಎರಡನೇ ಪ್ರಕರಣದಲ್ಲಿ, “ಖರೀದಿದಾರರಿಂದ ಆದಾಯ ಬಹಿರಂಗಪಡಿಸದ 26 ಕೋಟಿ ರೂ ಪತ್ತೆ ಹಚ್ಚಲಾಗಿದೆ” ಎಂದವರು ತಿಳಿಸಿದರು.

ಈ ವ್ಯವಹಾರದಲ್ಲಿ ಭಾರೀ ಪ್ರಮಾಣದಲ್ಲಿ ಅಘೋಷಿತ ಚಿನ್ನ ಮತ್ತು ಆಭರಣ ಹೂಡಿಕೆ ನಡೆದಿದೆ. ಹೀಗೆ ಎರಡು ಪ್ರಕರಣಗಳಲ್ಲಿ ಒಟ್ಟು 169 ಕೋಟಿ ರೂ ಪತ್ತೆಯಾಗಿದೆ. ಸದ್ಯ ಈ ಅಕ್ರಮ ಆಸ್ತಿ, ನಗದು ಮೂಲದ ಬಗ್ಗೆ ವಿಸ್ತøತ ತನಿಖೆ ನಡೆಯುತ್ತಿದೆ. ಆದರೆ ಇದುವರೆಗೂ ಈ ಗ್ರೂಪ್ ಯಾವುದೆಂದು ಇನ್ನೂ ಗೊತ್ತಾಗಿಲ್ಲ ಎಂದವರು ಸ್ಪಷ್ಟಪಡಿಸಿದರು.