ಇಸ್ರೇಲಿಗೆ ಪಾಕಿಸ್ತಾನಕ್ಕಿಂತಲೂ ಇರಾನಿನ ಭೀತಿಯೇ ಹೆಚ್ಚು

ಟೆಲಿಅವೀವ್ : 1981ರಲ್ಲಿ ಇರಾಕಿನ ಒಸಿರಾಕ್ ಎಂಬಲ್ಲಿದ್ದ ಅಣ್ವಸ್ತ್ರ ಘಟಕವನ್ನು ಧ್ವಂಸಗೊಳಿಸಿದ ಕೆಲವೇ ತಿಂಗಳುಗಳ ನಂತರ 1982ರಲ್ಲಿ ಇಸ್ರೇಲ್ ಕಹುತಾದಲ್ಲಿದ್ದ ಪಾಕಿಸ್ತಾನದ ಘಟಕವನ್ನು ಪಡೆದುಕೊಳ್ಳಲು ಯತ್ನಿಸಿತ್ತು ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸುತ್ತವೆ.
ಭಾರತ-ಇಸ್ರೇಲ್ ಜಂಟಿ ಕಾರ್ಯಾಚರಣೆಯಲ್ಲಿ ಈ ಸಾಹಸಕ್ಕೆ ಕೈಹಾಕಲಾಗಿದ್ದರೂ ನಂತರ ಭಾರತ ಸರ್ಕಾರ ಹಿಮ್ಮೆಟ್ಟಿದ ಕಾರಣ ಅರ್ಧಕ್ಕೇ ಕೈಬಿಡಲಾಗಿತ್ತು. ಇದರಿಂದ ಪಾಕಿಸ್ತಾನದೊಡನೆ ಸಂಘರ್ಷ ಹೆಚ್ಚಾಗುತ್ತದೆ ಎಂಬ ಭೀತಿ ಭಾರತಕ್ಕೆ ಇತ್ತು. ಈ ಆತಂಕಕ್ಕೆ ಸಕಾರಣಗಳೂ ಇದ್ದವು.
ಪಾಕಿಸ್ತಾನ ಮತ್ತು ಅಮೆರಿಕ ಆ ಸಂದರ್ಭದಲ್ಲಿ ನಿಕಟ ಸಂಬಂಧ ಹೊಂದಿದ್ದವು ಏಕೆಂದರೆ ಆಫ್ಘಾನಿಸ್ತಾನದಲ್ಲಿ ರಷ್ಯಾದ ವಿರುದ್ಧ ಸೆಣಸಲು ಅಮೆರಿಕ ಪಾಕಿಸ್ತಾನದ ಮೇಲೆ ಅವಲಂಬಿಸಿತ್ತು. ಹಾಗಾಗಿ ಈ ಘಟಕದ ಸ್ಥಾಪನೆಗೆ ಭಾರತ ಒಪ್ಪಿದ್ದಲ್ಲಿ ಭಾರತ ಪಾಕ್ ಯುದ್ಧ ಸಂಭವಿಸಿ ಅಮೆರಿಕಾ ಮಧ್ಯಸ್ತಿಕೆ ಅನಿವಾರ್ಯವಾಗುತ್ತಿತ್ತು.
ಆ ವೇಳೆಗಾಗಲೇ ಆಪ್ಘಾನಿಸ್ತಾನದಲ್ಲಿ ರಷ್ಯಾ ತನ್ನ ಅಧಿಪತ್ಯ ಸಾಧಿಸಿತ್ತು. ಹಾಗಾಗಿ ಭಾರತಕ್ಕೆ ರಷ್ಯಾ ಸೇನಾ ಬೆಂಬಲ ನೀಡುವ ಸಾಧ್ಯತೆಗಳೇ ಇರಲಿಲ್ಲ. ಆ ವೇಳೆಗಾಗಲೇ ತನ್ನ ನೆರೆ ರಾಷ್ಟ್ರಗಳೊಡನೆ ಸಂಘರ್ಷದಲ್ಲಿ ತೊಡಗಿದ್ದ ಇಸ್ರೇಲಿಗೆ ಕಳೆದುಕೊಳ್ಳುವುದೇನೂ ಇರಲಿಲ್ಲ. ಇರಾನ್ ಆಗಲಿ ಪಾಕಿಸ್ತಾನ ಆಗಲಿ ಅಣ್ವಸ್ತ್ರ ಬಳಸುವ ಅವಕಾಶವನ್ನು ಒಂದು ಬಾರಿ ಪಡೆಯಲು ಮಾತ್ರ ಅವಕಾಶವಿತ್ತು. ಈ ಹಿನ್ನೆಲೆಯಲ್ಲಿ ಇರಾನಿನ ಅಣುಬಾಂಬ್ ಪಾಕಿಸ್ತಾನದ ಬಾಂಬಿಗಿಂತಲೂ ಇಸ್ರೇಲಿಗೆ ಹೆಚ್ಚು ಅಪಾಯಕಾರಿಯಾಗಿ ಕಂಡಿತ್ತು.
ಇರಾನ್ ಪರಮಾಣು ಬಾಂಬ್ ತಯಾರಿಸುವುದೇ ಆದರೆ ಅದು ಇಸ್ರೇಲ್ ವಿರುದ್ಧ ಇರುತ್ತಿರಲಿಲ್ಲ ಬದಲಾಗಿ ಅಮೆರಿಕ ಅದರ ಗುರಿಯಾಗಿರುತ್ತಿತ್ತು. ಆದರೆ ನೇರವಾಗಿ ಅಮೆರಿಕದ ಮೇಲೆ ದಾಳಿ ನಡೆಸುವ ಸಾಮಥ್ರ್ಯ ಇಲ್ಲದ ಇರಾನ್ ಸಹಜವಾಗಿ ಇಸ್ರೇಲ್ ಮೇಲೆ ದಾಳಿ ನಡೆಸುವ ಸಂಭವವಿತ್ತು. ಇದೇ ರೀತಿ ಪಾಕಿಸ್ತಾನದ ಅಣು ಬಾಂಬ್ ಭಾರತವನ್ನು ಗುರಿಯಾಗಿರಿಸಿಕೊಂಡಿತ್ತು. ಇಸ್ರೇಲ್ ವಿರುದ್ಧ ಪಾಕಿಸ್ತಾನ ಅಣು ಬಾಂಬ್ ಪ್ರಯೋಗಿಸಿದರೂ ಕೂಡಲೇ ಅಂತಾರಾಷ್ಟ್ರೀಯ ಒತ್ತಡಕ್ಕೊಳಗಾಗಿ ತನ್ನ ಅಸ್ತ್ರಗಳನ್ನು ನಿಶ್ಶಸ್ತ್ರಗೊಳಿಸುವ ಸಾಧ್ಯತೆ ಇತ್ತು. ಇದರಿಂದ ಭಾರತ ಪಾಕಿಸ್ತಾನದ ಭೀತಿಯಿಂದ ಪಾರಾಗುತ್ತಿತ್ತು. ಭಾರತದ ವಿರುದ್ಧ ಪ್ರಯೋಗಿಸಲೆಂದೇ ನಿರ್ಮಿಸಿದ ಪರಮಾಣು ಘಟಕ ಪಾಕಿಸ್ತಾನದ ಪಾಲಿಗೆ ವ್ಯರ್ಥವಾಗುತ್ತಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.