ಎಂ ಎಸ್ ಮಹಮ್ಮದರೇ ಇಸ್ಲಾಂನಲ್ಲಿ ಸುಳ್ಳು ಹೇಳುವುದು ಹರಾಂ ಅಲ್ಲವೇ

ಡಿಸೆಂಬರ್ 29ರಂದು ಪತ್ರಿಕೆಯಲ್ಲಿ ಜಿ ಪಂ ಸದಸ್ಯ ಎಂ ಎಸ್ ಮಹಮ್ಮದ್ ಪತ್ರಿಕಾಗೋಷ್ಠಿಯಲ್ಲಿ ನೇತ್ರಾವತಿ ರಕ್ಷಣಾ ಸಂಯುಕ್ತ  ಸಮಿತಿ ಅಧ್ಯಕ್ಷ ಮಾಜಿ ಶಾಸಕ ಕೆ ವಿಜಯಕುಮಾರ್ ಶೆಟ್ಟರ ಮೇಲೆ ಕೆಲವು ಸುಳ್ಳು ಆರೋಪ ಹೊರಿಸಿರುವುವುದಕ್ಕೆ ಪತ್ರಿಕ್ರಿಯೆ
ಕಳೆದ ಅಸೆಂಬ್ಲಿ ಚುನಾವಣೆ ಸಂದರ್ಭ ಶಾಸಕ ಮೊೈದಿನ್ ಬಾವಾರ ಆಮಿಷಕ್ಕೊಳಗಾಗಿ ವಿಜಯಕುಮಾರ್ ಶೆಟ್ಟರು ಅವರಿಗೆ ಬೆಂಬಲ ನೀಡಿದರು ಎಂದು ಮಹಮ್ಮದ್ ಆರೋಪಿಸಿದ್ದಾರೆ  ಈ ಹಿಂದೆ ಕೂಡಾ ಈ ಅಪ್ರಚಾರ ವ್ಯಾಪಕವಾದಾಗ ಸ್ವತಃ ಶಾಸಕ ಮೊೈದಿನ್ ಬಾವಾ ದ ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ತುಂಬಿದ ಸಭೆ ಮುಂದೆ ತಾನು ವಿಜಯಕುಮಾರ್ ಶೆಟ್ಟರಿಗೆ ಯಾವುದೇ ಆಮಿಷವೊಡ್ಡಿಲ್ಲ ಎಂದು ಪವಿತ್ರ ಕುರ್‍ಅನ್ ಮೇಲೆ ಪ್ರಮಾಣ ಮಾಡಿ ಹೇಳಿರುವಾಗ ಒಬ್ಬ ಕಾಂಗ್ರೆಸ್ಸಿಗರಾಗಿ ಮಹಮ್ಮದರಿಗೆ ಈ ವಿಚಾರ ತಿಳಿದಿಲ್ಲವೇ   ಈ ರೀತಿ ಅಪ್ಪಟ ಸುಳ್ಳು ಹೇಳುವುದು ಇಸ್ಲಾಮಿನಲ್ಲಿ ಹರಾಂ ಅಲ್ಲವೇ
ದ ಕ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಸಚಿವ ಬಳಗದ ಕಪಿಮುಷ್ಠಿಯಲ್ಲಿ ಸಿಕ್ಕಿ ಹಾಕಿಕೊಂಡು ತನ್ನ ವರ್ಚಸ್ಸೆಲ್ಲವನ್ನು ಕಳೆದುಕೊಂಡಿದೆ ಮಹಮ್ಮದರಂತಹ ಉಸ್ತುವಾರಿ ಮಂತ್ರಿಗಳ ಚೇಲಾಗಳಿಗೆ ಮಾತ್ರ ಅಲ್ಲಿ ಸ್ವಾಭಿಮಾನ. ಕಳೆದ ಅಸೆಂಬ್ಲಿ ಹಾಗೂ ಮಂಗಳೂರು ಮಹಾನಗರಪಾಲಿಕೆ ಚುನಾವಣೆ ಸಂದರ್ಭ ಪಕ್ಷದ ಅಭ್ಯರ್ಥಿಗಳ ವಿಜಯಕ್ಕಾಗಿ ಹಗಲಿರುಳು ದುಡಿದ ವಿಜಯಕುಮಾರ್ ಶೆಟ್ಟರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಈಗ ಒಬ್ಬೊಬ್ಬರಿಗೆ ಎರೆಡೆರಡು ಸ್ಥಾನಗಳು  ಕೈಯಲ್ಲಿ ಅಧಿಕಾರ ಇದೆ ಎಂದು ಇಡೀ ಜಿಲ್ಲಾ ಕಾಂಗ್ರೆಸ್ ಸಮಿತಿಯನ್ನೇ ತನ್ನ ಕೈಗೊಂಬೆಯಾಗಿಸುವುದು ಸರಿಯೇ
ವಿಜಯಕುಮಾರ್ ಶೆಟ್ಟರು ಒಬ್ಬ ಪ್ರಾಮಾಣಿಕ ರಾಜಕಾರಣಿ  ಅವರು ಜನರ ಹಿತರಕ್ಷಣೆಗಾಗಿ ಹೋರಾಡುತ್ತಿದ್ದಾರೆ  ನೇತ್ರಾವತಿ ನದಿ ತಿರುವು ಯೋಜನೆ ಈ ಜಿಲ್ಲೆಗೆ ಮಾರಕವಾಗಲಿದೆ ಎಂಬುದನ್ನು ಅರಿತು ಅದನ್ನು ವಿರೋಧಿಸುತ್ತಿದ್ದಾರೆ  ಈ ಹೋರಾಟದಿಂದ ಅವರು ತನಗೆ ಸಿಗುತ್ತಿದ್ದ ಎಂ ಎಲ್ ಸಿ ಸ್ಥಾನದ ಅವಕಾಶ ಕೂಡಾ ಕಳೆದುಕೊಳ್ಳಬೇಕಾಗಿ ಬಂತು  ನೇತ್ರಾವತಿ ನದಿ ನೀರು ಕುಡಿದು ಬೆಳೆದ ಮತ್ತು ಈ ಜಿಲ್ಲೆಯ ಜನರ ಮತ ಪಡೆದವರಿಗೆ ಅಧಿಕಾರ ಮಾತ್ರ ಮುಖ್ಯವಾಗಿದೆ  ಇಲ್ಲವಾದಲ್ಲಿ ಅವರು ಕೂಡಾ ಈ ಯೋಜನೆ ವಿರೋಧಿಸುತ್ತಿದ್ದರು
ದ ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾಗಿ ಆಯ್ಕೆಯಾದ ಮಹಮ್ಮದ್ ತನ್ನ ಜವಾಬ್ದಾರಿ ನಿಭಾಯಿಸಲು ವಿಫಲರಾಗಿ ಅಲ್ಪ ಕಾಲದಲ್ಲಿಯೇ ಕಿತ್ತೆಸೆಯಲ್ಪಟ್ಟಿದ್ದು  ವಿಜಯಕುಮಾರ್ ಶೆಟ್ಟರು ಬ್ಲಾಕ್ ಮೀಟಿಂಗುಗಳನ್ನು ಕರೆಯುವುದಿಲ್ಲವೆಂದು ತನ್ನ ಅಜ್ಞಾನ ಪ್ರದರ್ಶಿಸಿದ್ದಾರೆ. ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಸಭೆ ನಿರಂತರ ನಡೆಯುತ್ತಿರುತ್ತದೆ  ಮಾತ್ರವಲ್ಲ  ಆ ವರದಿಗಳು ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುತ್ತದೆ. ಕಳೆದ ಎಲ್ಲಾ ಚುನಾವಣೆ ಸಂದರ್ಭ ಬಿಜೆಪಿ ದುರಾಡಳಿತದ ಬಗ್ಗೆ ಪದೇ ಪದೇ ಪ್ರತಿಭಟನೆ ನಡೆಸಿದ್ದು  ಪತ್ರಿಕಾಗೋಷ್ಠಿ ಕರೆದದ್ದು ವಿಜಯಕುಮಾರ್ ಶೆಟ್ಟಿ ಎಂಬುದು ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೂ ತಿಳಿದಿರುವಾಗ ಮಹಮ್ಮದರಿಗೆ ತಿಳಿಯದೇ ಇರುವುದು ದುರದೃಷ್ಟಕರ ಆದ್ದರಿಂದ ಪತ್ರಿಕಾಗೋಷ್ಠಿ ಕರೆಯುವ ಬದಲು ನಿತ್ಯವೂ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳುವುದನ್ನು ಮೊದಲು ಅಭ್ಯಾಸ ಮಾಡಲಿ

ಮೊಹಮ್ಮದ್ ಅಲಿ
ಕೂಳೂರು ಮಂಗಳೂರು