ರೋಹಿಂಗ್ಯಾ ಮುಸ್ಲಿಮರಿಗೆ ಇಸ್ಲಾಮಿಕ್ ದೇಶಗಳು ಆಶ್ರಯ ನೀಡಲಿ : ಆರೆಸ್ಸೆಸ್

ನವದೆಹಲಿ : ರೋಹಿಂಗ್ಯಾ ಮುಸ್ಲಿಂ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಲು ಇಸ್ಲಾಮಿಕ್ ರಾಷ್ಟ್ರಗಳು ಮುಂದೆ ಬರಲಿ ಎಂದು ಆರೆಸ್ಸೆಸ್ ಹಿರಿಯ ಮುಖಂಡ ಇಂದ್ರೇಶ್ ಕುಮಾರ್ ಆಗ್ರಹಿಸಿದರು. ರೋಹಿಂಗ್ಯಾಗಳು ಭಯೋತ್ಪಾದನಾ ಚಟುವಟಿಕೆಗಳಲ್ಲೂ ಶಾಮೀಲಾಗಿದ್ದಾರೆಂದು ಹಿಂದೂ ಸಂಘಟನೆ ಆರೋಪಿಸಿದೆ. ರೋಹಿಂಗ್ಯಾ ಮುಸ್ಲಿಮರಿಗೆ ದೇಶದಲ್ಲಿ ಆಶ್ರಯ ನೀಡುವುದಕ್ಕೆ ಕೇಂದ್ರ ಸರ್ಕಾರ ಅಸಮ್ಮತಿಸಿದ್ದು, ದೇಶದಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿರುವ ರೋಹಿಂಗ್ಯಾಗಳಿಗೆ ಭದ್ರತಾ ದೃಷ್ಟಿಯಿಂದ ಆಶ್ರಯ ನೀಡುವುದು ಸರಿಯಲ್ಲ ಎಂದು ಆರೆಸ್ಸೆಸ್ ಮತ್ತು ಬಿಜೆಪಿ ತನ್ನ ವಿರೋಧ ವ್ಯಕ್ತಪಡಿಸಿವೆ.