ಕಾರವಾರ ಇಸ್ಕಾನ್ ದೇವಸ್ಥಾನದಲ್ಲಿ ಜ 8ರಿಂದ ಜಗನ್ನಾಥ ರಥಯಾತ್ರೆ

ಇಸ್ಕಾನ್ ದೇವಳದ ಪ್ರಮುಖ ಅತುಲ ಕೃಷ್ಣದಾಸ್ ಪತ್ರಕರ್ತರೊಂದಿಗೆ ಮಾತನಾಡುತ್ತಿರುವುದು

ನಮ್ಮ ಪ್ರತಿನಿಧಿ ವರದಿ

ಕಾರವಾರ : “ನಗರದ ಇಸ್ಕಾನ್ ದೇವಸ್ಥಾನದಲ್ಲಿ ಜನವರಿ 8 ಹಾಗೂ 9ರಂದು ನಡೆಯಲಿರುವ ಜಗನ್ನಾಥ ರಥಯಾತ್ರೆಯಲ್ಲಿ ದೋಣಿ ಉತ್ಸವ ಹಾಗೂ ಮಕ್ಕಳ ಯಾತ್ರೆ ಆಯೋಜಿಸಲಾಗಿದೆ” ಎಂದು ದೇವಸ್ಥಾನದ ಪ್ರಮುಖರಾದ ಅತುಲ ಕೃಷ್ಣದಾಸ್ ತಿಳಿಸಿದರು.

ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ರವಿವಾರ ಮಧ್ಯಾಹ್ನ 3 ಗಂಟೆಗೆ ಹಬ್ಬುವಾಡದ ಇಸ್ಕಾನ್ ದೇವಾಲಯದಿಂದ ಆರತಿಯೊಂದಿಗೆ ರಥಯಾತ್ರೆ ಹೊರಡಲಿದೆ. ಸಂಜೆ 7 ಗಂಟೆಗೆ ಮುಖ್ಯ ಕಡಲತೀರವನ್ನು ತಲುಪಲಿದೆ. ನಂತರ ಮಯೂರವರ್ಮ ವೇದಿಕೆಯಲ್ಲಿ ಆಧ್ಯಾತ್ಮಿಕ ವಿಷಯದ ಕುರಿತು ಕೀರ್ತನೆ, ಭಜನೆ ಹಾಗೂ ಪ್ರವಚನ ನಡೆಯಲಿದೆ” ಎಂದು ತಿಳಿಸಿದರು.

“ರಥದಲ್ಲಿ ಭಗವಾನ ಜಗನ್ನಾಥ, ಭಲದೇವ ಹಾಗೂ ಸುಭದ್ರಾದೇವಿಯರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಸಾರ್ವಜನಿಕರಿಗೆ ರಥ ಎಳೆಯುವ ಅವಕಾಶವನ್ನು ಕಲ್ಪಿಸಲಾಗಿದೆ. ಅಲ್ಲದೆ ಈ ಬಾರಿ ಮಕ್ಕಳ ರಥಯಾತ್ರೆ ಹಾಗೂ ದೋಣಿ ಉತ್ಸವವನ್ನು ವಿಶೇಷವಾಗಿ ಸಂಘಟಿಸಲಾಗಿದೆ. ರಥಯಾತ್ರೆಯಲ್ಲಿ ಮಕ್ಕಳು ವಿವಿಧ ಪೌರಾಣಿಕ ವೇಷಧಾರಿಯಾಗಿ ಪಾಲ್ಗೊಳ್ಳಲಿದ್ದಾರೆ. ಅತ್ಯುತ್ತಮವಾಗಿ ವೇಷಧಾರಿಯಾದ 5 ಮಕ್ಕಳಿಗೆ ವಿಶೇಷ ಪ್ರಮಾಣ ಪತ್ರ ವಿತರಣೆ ಮಾಡಲಾಗುವುದು. ಮಕ್ಕಳಲ್ಲಿ ಆಧ್ಯಾತ್ಮದ ಬಗ್ಗೆ ಅರಿವು ಮೂಡಿಸಲು ಈ ಪ್ರಯತ್ನ ನಡೆಸಲಾಗಿದೆ” ಎಂದು ತಿಳಿಸಿದರು.