ಅಫ್ಘಾನಿಸ್ತಾನದ ಮೇಲೆ ಭಾರತದ ಪ್ರಭಾವ ಕಡಿಮೆಗೊಳಿಸಲು ಪಾಕ್ ಐಎಸ್ಸೈ ಹೊಸ ಮುಖ್ಯಸ್ಥನ ಯತ್ನ

ಇಸ್ಲಾಮಾಬಾದ್ : ಪಾಕಿಸ್ತಾನದ ಇಂಟರ್ ಸರ್ವಿಸಸ್ ಇಂಟಲಿಜೆನ್ಸ್ (ಐ ಎಸ್ ಐ) ಇದರ ಹೊಸ  ಮುಖ್ಯಸ್ಥರಾಗಿರುವ ಲೆ ಜ ನವೀದ್ ಮುಖ್ತರ್ ಅವರು ಯುದ್ಧ ಸಂತ್ರಸ್ತ ಅಫ್ಘಾನಿಸ್ತಾನದಲ್ಲಿ ಭಾರತದ ಪಾತ್ರವನ್ನು ಕಡಿಮೆಗೊಳಿಸಿ ಕಾಬುಲ್ ನಗರವು ನವದೆಹಲಿಯ ಪ್ರತಿನಿಧಿಯಾಗುವುದನ್ನು ತಡೆಯುವುದಕ್ಕಾಗಿ ಆಕ್ರಮಣಕಾರಿ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.

ಅಮೆರಿಕಾದ ಪಡೆಗಳು ಅಫ್ಘಾನಿಸ್ತಾನದಿಂದ ಹೊರಹೋಗುವ ಮೊದಲು ಅಲ್ಲಿನ ಸರಕಾರದಲ್ಲಿ ಮಿತವಾದಿ ತಾಲಿಬಾನ್ ಗುಂಪುಗಳನ್ನು ಸೇರಿಸಬೇಕು ಎಂದು ಐದು ವರ್ಷಗಳ ಹಿಂದೆ ಅವರು  ಯು ಎಸ್ ಆರ್ಮಿ ವಾರ್ ಕಾಲೇಜಿನಲ್ಲಿದ್ದಾಗ ಬರೆದಿದ್ದ ಅಧ್ಯಯನ ವರದಿ “ಅಫ್ಘಾನಿಸ್ತಾನ್- ಆಲ್ಟರ್ನೇಟಿವ್ ಫ್ಯೂಚರ್ಸ್ ಎಂಡ್ ದೆಯರ್ ಇಂಪ್ಲಿಕೇಶನ್ಸ್’ ಇದರಲ್ಲಿ ಬರೆದಿದ್ದರು. “ಪಾಕಿಸ್ತಾನದ ಭೂತಕಾಲ, ವರ್ತಮಾನ ಮತ್ತು ಭವಿಷ್ಯ ಅಫ್ಘಾನಿಸ್ತಾನದೊಂದಿಗೆ  ಹತ್ತಿರದ ಸಂಬಂಧ ಹೊಂದಿದೆ. ಪಾಕಿಸ್ತಾನದ ಸುರಕ್ಷತೆಗಾಗಿ ಅಫ್ಘಾನಿಸ್ತಾನದಲ್ಲಿ ಶಾಂತಿ, ಏಕತೆ ಮತ್ತು ಸ್ಥಿರತೆ ಅಗತ್ಯವಾಗಿದೆ” ಎಂದು ಅವರು ಬರೆದಿದ್ದರು.