ಹೋರ್ಡಿಂಗ್ ವಿಚಾರದಲ್ಲಿ ಉಡುಪಿ ನಗರಸಭೆ ಆದೇಶ ಪಾಲನೆಯಾಗುತ್ತಿದೆಯೇ

ಉಡುಪಿಯಲ್ಲಿ ಜಾಹೀರಾತು ಮತ್ತು ಶುಭಾಶಯದ ಬೋರ್ಡುಗಳು ರಸ್ತೆಯಲ್ಲಿ ಹಾಕುವಾಗ ಅದನ್ನು ಹಾಕಿದ ದಿನ ಮತ್ತು ತೆಗೆಯುವ ದಿನ ಮತ್ತು ನಗರಸಭೆ ಅನುಮತಿ ಮತ್ತು ನಂಬ್ರ ನಮೂದಿಸಬೇಕೆಂದು ನಗರಸಭೆಯವರು ಪತ್ರಿಕೆಯಲ್ಲಿ ಆಗಾಗ ಪ್ರಕಟಣೆ ಹಾಕುತ್ತಾ ಇರುತ್ತಾರೆ. ಆದರೆ ಉಡುಪಿಯಲ್ಲಿ ಹಾಕುವ ದೊಡ್ಡ ದೊಡ್ಡ ಕಟೌಟುಗಳಿಗೆ ಮೇಲೆ ತಿಳಿಸಿದ ಯಾವುದೇ ಆದೇಶಗಳಲ್ಲದೆ ಅದನ್ನು ರಸ್ತೆಯ ಬದಿಯಲ್ಲಿ ತಂದು ಕಟ್ಟುತ್ತಾರೆ. ಹಾಗಾಗರೆ ಕಾನೂನು ಯಾರಿಗಾಗಿ ? ಈಗಲೂ ಉಡುಪಿಯ ಕೃಷ್ಣ ವಿಲಾಸಿ ಹೋಟೆಲ್ ಹತ್ತಿರದ ಸರಕಾರಿ ಆಸ್ಪತ್ರೆ ಕಂಪೌಂಡಿನಲ್ಲಿರುವ ಕಟೌಟಿನಲ್ಲಿ ಯಾವುದೇ ಅನುಮತಿ ಪಡೆದ ನಂಬ್ರಗಳಿಲ್ಲ. ಇದಕ್ಕೆ ನಗರಸಭೆ ಯಾವ ಕ್ರಮ ತೆಗೆದುಕೊಳ್ಳುತ್ತದೆ ?
ಕಳೆದ ವಾರ ಚಿತ್ತರಂಜನ್ ಸರ್ಕಲಿನಲ್ಲಿ ಬಿ ಆರ್ ಶೆಟ್ಟಿ ಆಸ್ಪತ್ರೆ ಎದುರು ಮರು ಕಾಂಕ್ರಿಟೀಕರಣ ಮಾಡುವುದು ಬೇಡ ಎಂದು ಹಲವಾರು ಜನರು ಮೆರವಣಿಗೆ ಮಾಡಿ, ಪೊಲೀಸಿನವರು ಹಲವಾರು ಬ್ಯಾರಿಕೇಡುಗಳನ್ನು ತಂದು ಎಲ್ಲಾ ಕಡೆ ಇಟ್ಟು ರೋಡ್ ಬ್ಲಾಕ್ ಮಾಡಿದರು. ಕಾರ್ಯಕ್ರಮ ಮುಗಿದು ವಾರ ಕಳೆದರೂ ಜನ ಓಡಾಡುವ ಮಧ್ಯೆ , ಫುಟ್ಪಾತಿನಲ್ಲಿ ಹೀಗೆ ಜನರಿಗೆ ಉಪದ್ರವಾಗುವ ರೀತಿ ಬ್ಯಾರಿಕೇಡ್ ಹಾಗೆನೇ ಇದೆ. ಇದನ್ನು ಸಂಬಂಧಪಟ್ಟವರು ಅಲ್ಲಿಂದ ತೆರವುಗೊಳಿಸಬೇಕೆಂದು ವಿನಂತಿ

  • ಟಿ ಕೆ ಆರ್ ಪ್ರಸಾದ್  ಉಡುಪಿ