ಅಚ್ಛೇದಿನ್ ಅಂದ್ರೆ ಇದೇನಾ

ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಇಡೀ ದೇಶದಲ್ಲಿ ಬಡತನವೇ ಇರುವುದಿಲ್ಲ ಮತ್ತು ಭ್ರಷ್ಟಾಚಾರದ ನಿರ್ಮೂಲನೆಯಾಗುತ್ತದೆ. ಸ್ವಿಸ್ ಬ್ಯಾಂಕಿನಲ್ಲಿನ ಕಾಳಧನಿಕರ ಹಣವನ್ನು ತಂದು ಪ್ರತಿಯೊಬ್ಬರ ಖಾತೆಗೆ ಇಂತಿಷ್ಟು ಪಾವತಿಸಲಾಗುವುದು ಎಂದು ಶಪತಗೈದಿದ್ದ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಬೆಲೆಯೇರಿಕೆ ಎಂಬುದು ಸಾಮಾನ್ಯ ಎಂಬಂತಾಗಿದೆ.
ಇದೀಗ ಗಾಯದ ಮೇಲೆ ಬರೆ ಎಳೆದಂತೆ ವಾಹನ ನೋಂದಣಿ, ಮತ್ತಿತರ ಶುಲ್ಕಗಳನ್ನು ಹೆಚ್ಚಳ ಮಾಡಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕೇಂದ್ರ ಸರಕಾರ ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯ ಶುಲ್ಕ ಪರಿಷ್ಕರಣೆ ಮಾಡಿ ಕಳೆದ ಡಿಸೆಂಬರ್ 29ರಿಂದಲೇ ಜಾರಿಗೆ ಬರುವಂತೆ ವಾಹನ ನೋಂದಣಿ, ಚಾಲನಾ ಪರವಾನಗಿ, ಮಾಲಿಕತ್ವ ಬದಲಾವಣೆ ಮೊದಲಾದ ಸೇವೆಗಳ ಶುಲ್ಕವನ್ನು ಸುಮಾರು 2ರಿಂದ 6 ಪಟ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಹೊಸ ವರ್ಷದ ಆರಂಭದಲ್ಲಿ ಭಾಷಣ ಮಾಡಿದ ಪ್ರಧಾನಿಯವರು ಜನರ ಮೇಲೆ ಮತ್ತೆ ಯಾವುದೇ ಹೊಸ ಹೊರೆಯನ್ನು ಹೇರದೆ, ಹೊಸ ಯೋಜನೆಗಳನ್ನು ಪ್ರಕಟಿಸುವ ಮೂಲಕ ಬಡ ಮತ್ತು ಮಧ್ಯಮ ವರ್ಗದವರಿಗೆ ಹೊಸ ವರ್ಷಕ್ಕೆ ಕೊಡುಗೆ ನೀಡಿದ್ದಾರೆ ಎನ್ನುವಷ್ಟರಲ್ಲಿಯೇ ಇಂತಹದ್ದೊಂದು ಅಮಾನವೀಯ ಹೊರೆ ಇ
ದೇಶದ ಜನತೆಯನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಆದರೆ, ಇದರ ವಿರುದ್ಧ ಚಳುವಳಿಗಳೇಕೋ ಗಟ್ಟಿಯಾಗದಿರುವುದು ಸೋಜಿಗವೇ ಸರಿ. ಮೋದಿ ನೇತೃತ್ವದ ಕೇಂದ್ರ ಸರಕಾರ ಮುಂದಿನ ದಿನಗಳಲ್ಲಿ ಇಡೀ ಭಾರತವನ್ನು ಖಾಸಗೀಕರಣ ಮಾಡಲು ಹೊರಟಿರುವಾಗ ಎಲ್ಲರೂ ದನಿ ಎತ್ತಲೇಬೇಕಿದೆ.

  • ಎ ಸುರೇಶ್ ಸುವರ್ಣ ಯೆಯ್ಯಾಡಿ ಮಂಗಳೂರು