ಹಳೆಯಂಗಡಿಯಲ್ಲಿ ಇದು ಸ್ವಚ್ಛ ಭಾರತವೇ ?

ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚೇಳಾೈರಿಗೆ ಹೋಗುವ ಒಳ ರಸ್ತೆಯ ಸಮೀಪ ಜನರು ಕಸವನ್ನು ತಂದು ಸುರಿಯುತ್ತಿದ್ದಾರೆ. ಇದು ಕಸ ಸುರಿಯುವ ಜಾಗ ಅಲ್ಲ ಎಂಬುದಾಗಿ ಸ್ಥಳೀಯ ಗ್ರಾಮ ಪಂಚಾಯತ್ ಎಚ್ಚರಿಕೆ ನೀಡಿದ್ದರೂ ಜನರು ಅದನ್ನು ಲೆಕ್ಕಿಸಿಲ್ಲ. ಇದು ಸ್ವಚ್ಛ ಭಾರತವೇ ? ಎಲ್ಲವನ್ನು ಆಡಳಿತದವರೇ ಮಾಡಬೇಕು, ಸಂಘಸಂಸ್ಥೆಗಳೇ ಮುಂದೆ ಬರಬೇಕು ಅಂದರೆ ಆಗದು. ಸ್ವಚ್ಛ ಭಾರತದ ಬಗ್ಗೆ ಜನರು ಸ್ಪಷ್ಟವಾದ ಕಲ್ಪನೆ ಹೊಂದದ ಹೊರತು ಅದು ಯಶಸ್ವಿಯಾಗಲು ಸಾಧ್ಯವಿಲ್ಲ.