ಸಿಡಿಲಾಘಾತ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುವುದೆಂದು

ಪ್ರತಿಸಲವೂ ಮಳೆಗಾಲ ಆರಂಭದಲ್ಲಿ ಹಲವಾರು ಜೀವಗಳು ಸಿಡಿಲಿನ ಆಘಾತಕ್ಕೆ ಬಲಿಯಾಗುವುದಲ್ಲದೇ ಹಲವರು ಮನೆ ಸಮೇತ ಅಮೂಲ್ಯ ಎಲೆಕ್ಟ್ರಾನಿಕ್ ಸ್ವತ್ತುಗಳು ಸುಟ್ಟು ಹೋಗಿ ನಷ್ಟ ಅನುಭವಿಸುತ್ತಿರುವ ಸುದ್ದಿಯನ್ನು ರಾಜ್ಯಾದಾದ್ಯಂತ ಕಾಣುತ್ತಿದ್ದೇವೆ ಈಗಿನ ತಂತ್ರಜ್ಞಾನದ ಕಾಲಘಟ್ಟದಲ್ಲಿ ಎಂತಹ ಸಮಸ್ಯೆಗಳಿಗೂ ಪರಿಹಾರವಿದೆ  ಆದರೆ ಈ ಸಿಡಿಲಾಘಾತದ ಸಮಸ್ಯೆಗೆ ಶಾಶ್ವತವಾದ ಪರಿಹಾರವೇ ದೊರಕುತ್ತಿಲ್ಲವೆಂದರೇನು  ಮಿಂಚು ಸೆಳೆತದಂತಹ ತಂತ್ರಜ್ಞಾನ ಸಿಡಿಲಪ್ಪಳಿಸುವಿಕೆ ತಡೆಯುತ್ತದೆ ಎಂಬ ಪ್ರತೀತಿ ಇದೆ  ಇದು ನಿಜವೇ ಆದರೆ ಸರಕಾರ ಕಾರ್ಯಕ್ರಮದ ಮೂಲಕ ಜನರಲ್ಲಿ ಒಂದಷ್ಟು ಜಾಗೃತಿ ಮೂಡಿಸುವುದರೊಂದಿಗೆ ಇಂತಹ ಉಪಕರಣಗಳನ್ನು ಸರಕಾರಿ ಸಬ್ಸಿಡಿಗಳ ಮೂಲಕ ಜನರಿಗೆ ವಿತರಿಸಬಹುದಲ್ಲವೇ  ಸಿಡಿಲಿನ ಆಘಾತ ತಡೆಯುವಲ್ಲಿ ಸರಕಾರ ಯತ್ನಿಸಿದರೆ ಪ್ರತೀ ಮಳೆಗಾಲದಲ್ಲೂ ಒಂದಷ್ಟು ಜೀವ ಕಳೆದುಕೊಳ್ಳುವ ಪ್ರಮೇಯವೇ ಬರಲಾರದು

  • ಕೆ ಎನ್ ಶೆಟ್ಟಿ   ಬ್ರಹ್ಮಾವರ